ಜವಳಿ ನಿಗಮದ ಅಧ್ಯಕ್ಷರಾಗಿ
ಗುತ್ತಿಗನೂರು ವಿರೂಪಾಕ್ಷಗೌಡ ಪದಗ್ರಹಣ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.01: ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಇಂದು ಬೆಂಗಳೂರಿನ ನಿಗಮದ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಗುತ್ತಿಗನೂರು ವಿರೂಪಾಕ್ಷಗೌಡ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಮುದ್ದಯ್ಯ ಅವರು ವಿರೂಪಾಕ್ಷಗೌಡರಿಗೆ ನಿಗಮದ ಅಧ್ಯಕ್ಷರ ಜವಾಬ್ದಾರಿಯನ್ನು ವಹಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ, ಕಾರಪುಡಿ ಮುದ್ದನಗೌಡ, ಗುತ್ತಿಗನೂರು ಗ್ರಾಮದ ಜನತೆ ಉಪಸ್ಥಿತರಿದ್ದು ಶುಭ ಹಾರೈಸಿದರು.
ಅಧಿಕಾರ ಸ್ವೀಕರಿಸಿದ ನಂತರ ದೂರವಾಣಿಯಲ್ಲಿ ಸಂಜೆವಾಣಿಯೊಂದಿಗೆ ಮಾತನಾಡಿದ ವಿರೂಪಾಕ್ಷಗೌಡರು ನಿಗಮದ ಕಾರ್ಯಚಟುವಟಿಕೆಗಳ ಬಗ್ಗೆ ಅರಿತುಕೊಂಡು ಬಳ್ಳಾರಿ ಜಿನ್ಸ್ ಹಾಗೂ ಟೆಕ್ಸ್ ಟೈಲ್ಸ್ ಉದ್ಯಮದಲ್ಲಿ ಈ ಹಿಂದಿನಿಂದ ಹೆಸರು ಹೊಂದಿದೆ. ಮತ್ತಷ್ಟು ಅಭಿವೃದ್ಧಿಗೆ ಜವಳಿ ಪಾರ್ಕ್ ಅಭಿವೃದ್ಧಿ ಮೊದಲಾದ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯದ, ಜಿಲ್ಲೆಯ ಮುಖಂಡರು, ಸಚಿವರು, ಶಾಸಕರ ಸಹಕಾರದಿಂದ ಮಾಡಲಿದೆಂದರು.

Attachments area