ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ
ಗುತ್ತಿಗನೂರು ವಿರೂಪಾಕ್ಷಗೌಡ ನೇಮಕ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,26- ರಾಜ್ಯದ ಜವಳಿ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ನಗರದ ವಾಜಪೇಯಿ ಲೇಔಟ್ ನಿವಾಸಿ ಗುತ್ತಿಗನೂರು ವಿರೂಪಾಕ್ಷಗೌಡ ಅವರನ್ನು ಸರ್ಕಾರ ನೇಮಕ ಮಾಡಿ ನಿನ್ನೆ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ನಿನ್ನೆ ಹಲವಾರು   ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದು ಇದರಲ್ಲಿ ವೀರೂಪಾಕ್ಷಗೌಡ ಅವರು ಸಹ ಸೇರಿದ್ದಾರೆ.
ವಿದ್ಯಾರ್ಥಿ ಜೀವನದಿಂದಲೂ ಎಬಿವಿಪಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ವಿರೂಪಾಕ್ಷಗೌಡರು. ಪಕ್ಷದಲ್ಲಿ ಹಂತ ಹಂತವಾಗಿ ವಿವಿಧ ಪದಾಧಿಕಾರಿಗಳಾಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಅವರ ಆಡಳಿತ ಅವಧಿಯಲ್ಲಿ ಕರ್ನಾಟಕ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಪಕ್ಷದ ನಿಷ್ಟಾವಂತ ಕಾರ್ಯಕರ್ತರಾದ ಇವರು ಜಿಲ್ಲೆಯಲ್ಲಿನ ಮೂಲ ಬಿಜೆಪಿಯಲ್ಲಿ ಒಬ್ಬರು. ಯಾವುದೇ ಸಂದರ್ಭದಲ್ಲಿ ಪಕ್ಷದ ಪರ ನಿಂತು ಪಕ್ಷ ಕಟ್ಟಿದವರು. ಹಾಗಾಗಿ ಪಕ್ಷದ ಕೇಂದ್ರ ಮಟ್ಟದ ನಾಯಕರ ಸಂಪರ್ಕ, ಪಕ್ಷದಲ್ಲಿನ ಸೇವೆಯಿಂದ ಈ ಭಾಗ್ಯ ಒಲಿದಿದೆ ಎಂದು ಹೇಳಬಹುದು.
2013 ರಲ್ಲಿ ಜಿಲ್ಲೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಒಇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.  ಹಾಲಿ ರಾಜ್ಯ ಬಿಜೆಪಿ  ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. 
ತಮ್ಮ ನೇಮಕದ ಬಗ್ಗೆ ಸಂಜೆವಾಣಿಯೊಂದಿಗೆ ಮಾತನಾಡಿದ ವಿರೂಪಾಕ್ಷಗೌಡರು. ಪಕ್ಷ ಸಂಘಟನೆ, ಪಕ್ಷದಲ್ಲಿನ ನಿಷ್ಠೆ, ಹೋರಾಟದ ಬದುಕನ್ನು ಗುರುತಿಸಿ ಈ ಜವಾಬ್ದಾರಿ ನೀಡಿದೆ. ಕೊಟ್ಟಿರುವ ಜವಾಬ್ದಾರಿಯನ್ನು ಶ್ರದ್ಧಾ ಪೂರ್ವಕವಾಗಿ ಕಾರ್ಯನಿರ್ವಹಿಸುವೆ. ತಮ್ಮ ನೇಮಕಕ್ಕೆ  ಸಹಕಾರ ನೀಡಿದ ಎಲ್ಲಾ ಮುಖಂಡರಿಗೆ ಧನ್ಯವಾದ ತಿಳಿಸಿದ್ದಾರೆ.

Attachments area