ಜವಳಗೇರಾ ವ್ಯಕ್ತಿ ತಡೆದು ಹಣ ದರೋಡಿ ಬಂಧನ

ಸಿಂಧನೂರ,ಅ.೩- ಬೈಕನಲ್ಲಿ ಬರುವ ವ್ಯಕ್ತಿಯನ್ನು ತಡೆದು ಹಣ ದರೋಡಿ ಮಾಡಿದ ಕಳ್ಳರನ್ನು ಪೋಲೀಸರು ಬಂದಿಸುವಲ್ಲಿ ಯಶಸ್ಸಿಯಾಗಿದ್ದು.ತಾಲುಕಿನಲ್ಲಿ ಇದು ಎರಡನೇಯ ದರೋಡೆ ಪ್ರಕರಣವಾಗಿದೆ
ಭೀಮಣ್ಣ ತಂದೆ ವೀರಪ್ಪ ವ. ೫೫ ಆಟೋ ಚಾಲಕ ಸುಕಾಲಪೇಟೆ ಸಿಂಧನೂರ ಹಣ ಕಳಕೊಂಡ ವ್ಯಕ್ತಿಯಾಗಿದ್ದಾನೆ ದಿನಾಂಕ ೨೯.೭.೨೦೨೨.ರಂದು ಭೀಮಣ್ಣ ಮಾನ್ವಿ ತಾಲ್ಲೂಕಿನಲ್ಲಿ ಕೊತ್ತಂಬರಿ ಮಾರಾಟ ಮಾಡಿ ಬಂದ ೧.ಲಕ್ಷ ಹಣ ತೆಗೆದುಕೊಂಡು ಬರುವಾಗ ಕಳ್ಳರು ಹಣ ದರೋಡಿ ಮಾಡಿದ್ದಾರೆ
ಹಣ ತೆಗೆದುಕೊಂಡು ಞಂ.೩೬.ee.೯೫೧೧ ನಂಬರಿನ ತನ್ನ ಸ್ಕೂಟಿ ಯಲ್ಲಿ ಮಾನ್ವಿ ತಾಲ್ಲೂಕಿನಿಂದ ಸಿಂಧನೂರ ಗೆ ಬರುವಾಗ ಇದನ್ನ ಗಮನಿಸಿದ ದರೋಡಿ ಕೊರರು ಕಪ್ಪು ಬಣ್ಣದ ಕೆಎ.೩೬. ಡಬ್ಲೂ.೮೩೦೧ ನಂಬರಿನ .ಹೀರೊ ಹೊಂಡಾ ಬೈಕನಲ್ಲಿ ಹಿಂಬಾಲಿಸಿಕೊಂಡು ಬಂದು ಜವಳಗೇರಾದ ತುಂಗಭದ್ರ ಎಡದಂಡೆ ನಾಲೆಯ ಹತ್ತಿರ ಮೂವರು ಆರೋಪಿಗಳು ಗಾಡಿ ಅಡ್ಡ ಹಾಕಿ ಯಾಕೆ ಎನಾಯಿತು ಎನ್ನುವಷ್ಷರಲ್ಲಿ ವ್ಯಕ್ತಿಯನ್ನು ಗಟ್ಟಿಯಾಗಿ ಇಡಿದುಕೊಂಡು ಜೇಬಿನಲ್ಲಿದ್ದ ೧ ಲಕ್ಷ ಹಣವನ್ನು ಕಿತ್ತುಕೊಂಡು ಒಡಿಹೊಗಿದ್ದಾರೆ
ಜಿಲ್ಲಾ ಪೋಲೀಸ ವರಿಷ್ಠಾದಿಕಾರಿ . ಹಾಗು ಹೆಚ್ಚುವರಿ ಪೋಲಿಸವರಿಷ್ಷಾದಿಕಾರಿ ಮಾರ್ಗದರ್ಶನದಲ್ಲಿ ಲಿಂಗಸೂಗೂರ ಡಿವೈಎಸ್ಪಿ ಮಂಜುನಾಥ ನೇತೃತ್ವದಲ್ಲಿ ಸಿಪಿಐ ಉಮೇಶ ಕಾಂಬಳೆ ಬಳಗಾನೂರ ಪಿಎಸ್‌ಐ ವಿರೇಶ ಶಿಬ್ಬಂದಿಗಳಾದ ರೇವಣಸಿದ್ದಪ್ಪ ಅಫೀಜ ವುಲ್ಲಾ ದೇವರಾಜ .ಬಸಯ್ಯ ಸ್ವಾಮಿ.. ಯಂಕಪ್ಪ. ಸಂಗನಗೌಡ .ಅಶೋಕ .ಆದಯ್ಯ .ನೇತೃತ್ವದ ತಂಡ ಮಿಂಚಿನ ಕಾರ್ಯಚರಣೆ ನೆಡೆಸಿ ಪ್ರಕರಣ ದಾಖಲಿಸಿಕೊಂಡ ಕೆಲವೆ ಗಂಟೆಗಳಲ್ಲಿ ಆರೋಪಗಳನ್ನು ಮಾನ್ವಿ ಯಲ್ಲಿ.ಬಂಧಿಸಿ. ಹಣ ಹಾಗು ಬೈಕನ್ನುವಶಪಡಿಸಿಕೊಳ್ಳಲಾಗಿದೆ
ಆರೋಪಿಗಳಾದ ರವಿ ಪೂಜಾರಿ ವ.೨೨.ಮಾನ್ವಿ ತಾಲುಕಾ ಮಾದ್ಲಾಪೂರ. ರಮೇಶ ಮಡಿವಾಳ.೨೨.ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಈರ ಕುಮಾರ ನಾಯಕ ವ.೨೦.ಚೀಕಲಪರ್ವಿ ಮೂವರು ಆರೋಪಿಗಳನ್ನು ಕೃಷ್ಣನ ಜನ್ಮ ಸ್ಥಳಕ್ಕೆ ಕಳಿಸಲಾಗಿದೆ ಎಂದು ಸಿಪಿಐ ಉಮೇಶ ಕಾಂಬಳೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು ಬಳಗಾನೂರ ಪಿಎಸ್‌ಐ ವಿರೇಶ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು
ಪ್ರಕರಣ ದಾಖಲಿಸಿಕೊಂಡು ಕೆಲವೆ ಗಂಟೆಗಳಲ್ಲಿ ಮಿಂಚಿನ ಕಾರ್ಯಚರಣೆ ನಡೆಸಿ ಹಣದ.ಸಮೇತ ಆರೋಪಿಗಳನ್ನು ಬಂಧಿಸಿರುವ ಪೋಲೀಸ ತಂಡದ ಕಾರ್ಯವನ್ನು ಜಿಲ್ಲಾಪೋಲಿಸ ವರಿಷ್ಠಾಧಿಕಾರಿ ನೀಖಿಲ್.ಬಿ.ಹೆಚ್ಚುವರಿ ಪೋಲೀಸ ವರಿಷ್ಠಾಧಿಕಾರಿ ಶಿವಕುಮಾರ ಶ್ಲಾಘಸಿದ್ದಾರೆ