ಜವಳಗೇರಾ ಮತದಾನದ ಜಾಗೃತಿ ತಾಯ್ತನ ಸುರಕ್ಷಾs

ಸಿಂಧನೂರು,ಏ.೧೩- ಜವಳಗೇರಾ ಗ್ರಾಮದ ಸರ್ಕಾರಿ ಆಸ್ಪತ್ರೆ ಹಾಗೂ ಮಾರುತಿ ನಗರ ಅಂಗನವಾಡಿ ಕೇಂದ್ರ ದಲ್ಲಿ ಮತದಾನ ಜಾಗೃತಿ ವಿಶ್ವ ಆರೋಗ್ಯ ದಿನಾಚರಣೆ ಹಾಗೂ ತಾಯ್ತನದ ಬಗ್ಗೆ ಮಹಿಳೆಯರು ಹಾಗೂ ಸಾರ್ವಜನಿಕರಲ್ಲಿ ಅರಿವು ಜಾಗೃತಿ ಮೂಡಿಸಲಾಯಿತು.
ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜವಳಗೇರಾ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆ ಹಾಗೂ ರಾಷ್ಟ್ರೀಯ ಸುರಕ್ಷಾ ತಾಯ್ತನದ ಬಗ್ಗೆ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಸಂಗನಗೌಡ ಪಾಟೀಲ ಮಹಿಳೆಯರಿಗೆ ಅರಿವು ಮೂಡಿಸುವ ಕೆಲಸ ಮಾಡಿದರು.
ಗ್ರಾಮದ ಮಾರುತಿ ನಗರ ಅಂಗನವಾಡಿ ಕೇಂದ್ರ, ೧ ರಲ್ಲಿ ಮತದಾನದ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸುವ ಜೊತೆಗೆ ಪ್ರತಿಜ್ಞೆ ವಿಧಿ ಯನ್ನು ತಾಲುಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ ಭೋದಿಸಿ ಎಲ್ಲರು ಕಡ್ಡಾಯ ವಾಗಿ ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಡಾ.ಸಂಪದ.ಆಸ್ಪತ್ರೆಯ ಸಿಬ್ಬಂದಿಗಳಾದ ಸುಧಾ, ಮೇರಿ, ಮಂಜುಳ, ಮಹೇಶ ಕುಮಾರ ವಿಕಾಸ, ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಬಾಣಂತಿಯರು, ಗರ್ಭಿಣಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.