ಜವಳಗೇರಾ ನಾಡಗೌಡ ಹೆಚ್ಚುವರಿ ಭೂ ಹಂಚಿಕೆ ಹೋರಾಟಕ್ಕೆ ಬೆಂಬಲ- ವಿಜಯರಾಣಿ

ರಾಯಚೂರು,ಅ.೧೬- ಸಿಂಧನೂರಿನ ಜವಳಗೇರಾ ನಾಡಗೌಡ ಅಕ್ರಮ ವರ್ಷದಲ್ಲಿ ರುವ ಸಿಂಧನೂರಿನ ಸರ್ವೆ ನಂಬರ್ ೪೧೯ ಮತ್ತು ಸುಲ್ತಾನ್ ಪೂರ್ಣ ಸರ್ವೆ ನಂರ್ಬ ೧೮೬ ರ ಒಟ್ಟು ೬೨.೩೭ ಎಕರೆ ಹೆಚ್ಚುವರಿ ಭೂಮಿಯನ್ನು ಕೂಡಲೇ ಭೂ ರೈತರಿಗೆ ವಿತರಿಸಬೇಕೆಂದು ಆಗ್ರಹಿಸಿ ದಿ೧೭ ರಂದು ಸಿಂಧನೂರಿನ ಗಾಂಧಿ ವೃತ್ತದ ಬಳಿ ಬೃಹತ್ ರಸ್ತೆ ತಡೆ ಚಳುವಳಿಗೆ ಮಹಾಶಕ್ತಿ ಮಹಿಳಾ ಸಬಲೀಕರಣ ಸಮತಿಯಿಂದ ಸಂಪೂರ್ಣ ಬೆಂಬಲ ಸೂಚಿಸಲಾಗುವುದು ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರು ವಿಜಯರಾಣಿ ಹೇಳಿದರು.
ಉದ್ದೇಶದ ಹೋರಾಟ ಮತ್ತು ಸಿಪಿಎಂ (ಎಂಎಲ್) ರೆಡ್ ಸ್ಟಾರ್ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಡೆಯಲಿದೆ. ಹೆಚ್ಚುವರಿ ಭೂಮಿಗೆ ಸಂಬಂಧಿಸಿದ ಭೂ ನ್ಯಾಯ ಮಂಡಳಿ ಆದೇಶ ಅನು ಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಕಳೆದ ೪೦ ವರ್ಷಗಳಿಂದ ಭೂ೧೯೭೪ರಲ್ಲಿ ಜವಳಗೇರ ಜಮೀ ನಾರರು, ೯ ಘೋಷಣಾ ಪತ್ರ ಸಲ್ಲಿಸಿದ್ದಾರೆ. ಪ್ರತಿಯೊಂದು ಘೋ ಷಣಾ ಪತ್ರದಲ್ಲಿ ೫೦೦ ರಿಂದ ೭೦೦ ಎಕರೆ ಜಮೀನು ತೋರಿಸಲಾಗಿದೆ. ಭೂ ಸಾಗುವಳಿ ಮಾಡುವ ರೈತರಿಗೆ ಹೆಚ್ಚುವರಿ ಭೂಮಿ ಹಂಚಿಕೆ ಮಾಡುವಂತೆ ಆಗ್ರಹಿಸಿ ನಾಳೆ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.