ಜವಳಗೇರಾ ಅಕ್ರಮ ಗಾಂಜಾ ಮಾರಾಟ ಪಾಲಕರು ಅತಂಕ

ಸಿಂಧನೂರು,ಆ.೧೪-
ಜವಳಗೇರಾದಲ್ಲಿ ರಾಜಾರೋಸವಾಗಿ ಅಕ್ರಮ ಗಾಂಜಾ ಮಾರಾಟ ವಾಗುತ್ತಿದ್ದು ಯುವಕರು ಬಲಿಯಾಗುತ್ತಿದ್ದಾರೆ ಇದಕ್ಕೆ ಪೋಲೀಸರು ಕಡಿವಾಣ ಹಾಕಬೇಕು ನಿರ್ಲಕ್ಷ್ಯ ಮಾಡಿದರೆ ಮುಂದೊಂದು ದಿನ ಗಾಂಜಾ ಮಾರಾಟ ನಿಮಗೆ ಉರಳಾಗಬಹುದು.
ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಯುವಕರು ಗಾಂಜಾ ಸೇವನೆ ಮಾಡುವ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ಧರು ಮಕ್ಕಳ ಗಾಂಜಾ ಸೇವನೆ ಮಾಡುವದನ್ನು ಆದರೆ ನೋಡಿ ಪಾಲಕರು ಆತಂಕ ಗೊಂಡಿದ್ದಾರೆ ಕೆಲವು ತಿಂಗಳುಗಳಿಂದ ಅದು ಸಾರ್ವಜನಿಕ ಸ್ಥಳಗಳಲ್ಲಿ ,ದೇವಸ್ಥಾನ, ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆ, ಕೆಇಬಿ, ಸ್ಮಶಾನ ಸೇರಿದಂತೆ ಬಯಲು ಜಾಗದಲ್ಲಿ ಬಹಿರಂಗವಾಗಿ ಗಾಂಜಾ ಸೇವನೆ ಮಾಡುತ್ತಿದ್ದು ಕಂಡು ಬಂದಿದೆ.
ಗಾಂಜಾ ಸೇವನೆ ಮಾಡಿದ ಯುವಕರು ಗಾಂಜಾ ಸೇದಿದ ನೇಶೆಯಲ್ಲಿ ರಾತ್ರಿಯ ಸಮಯದಲ್ಲಿ ಗ್ರಾಮದಲ್ಲಿರುವ ದೇವಸ್ಥಾನ, ಅಂಗಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಕಳ್ಳತನ ಮಾಡಿದ್ದಾರೆ ಕೆಲವ ದಿನಗಳ ಹಿಂದೆ ಗ್ರಾಮದಲ್ಲಿರುವ ಅಮರಗುಂಡಪ್ಪ ಇವರ ಅಂಗಡಿ ಕಳ್ಳತನ ಮಾಡಿದ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕದು ಆರೋಪಿಗಳು ಪರಾರಿ ಯಾಗಿದ್ದು ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
ಗಾಂಜಾ ಎಲ್ಲಿಂದ ಯಾರು ತಂದು ಮಾರುತ್ತಾರೊ ಗೊತ್ತಿಲ್ಲ ಆದರೆ ಪ್ರತಿದಿನ ಗ್ರಾಮದ ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆ, ಕೆಇಬಿ, ತಿಮ್ಮಾಪುರು ರಸ್ತೆಯಲ್ಲಿರುವ ಸ್ಮಶಾನ, ಗ್ರಾಮದ.ಹನುಮಂತ ದೇವಸ್ಥಾನದ ಆವರಣದಲ್ಲಿ ಸಂಜೆ ೬ ಗಂಟೆ ಮೇಲೆ ಪೋಲೀಸರು ಬಂದು ನೋಡಿದರೆ ಗಾಂಜಾ ಸೇವನೆ ಮಾಡುವವರನ್ನು ಕಣ್ಣಾರೆ ನೋಡಬಹುದು.
ಗಾಂಜಾ ಸೇವನೆ ಚಟಕ್ಕೆ ಯುವಕರು ಬಲಿಯಾಗುತ್ತಿದ್ದು ಸಂಜೆ ಯಾಗುತ್ತೆಲೆ ಮನೆ ಮಠ ಬಿಟ್ಟು ಯುವಕರು ಗಾಂಜಾ ಸೇವನೆ ಮಾಡಲು ಗಂಪು ಗುಂಪಾಗಿ ಸೇರಿ ಗಾಂಜಾ ಸೇವನೆ ಮಾಡುತ್ತಿದ್ದು ಇದರಿಂದ ಪಾಲಕರು ಮಕ್ಕಳ ಭವಿಷ್ಯ ದ ಬಗ್ಗೆ ಚಿಂತೆ ಮಾಡಿ ಇದಕ್ಕೆ ಕಡಿವಾಣ ಹಾಕುವಂತೆ ಪೋಲೀಸರನ್ನು ಒತ್ತಾಯ ಮಾಡಿದ್ದಾರೆ.
ಗಾಂಜಾ ಸೇವನೆ ಮಾಡುವ ಕೆಲ ಯುವಕರನ್ನು ಬಳಗಾನೂರು ಠಾಣೆಯ ಪೋಲೀಸರು ಇಡಿದು ಠಾಣೆಗೆ ಕರೆದು ಕೊಂಡು ಹೋದರೆ ರಾಜಕಾರಣಿಗಳು ಪೋಲೀಸರಿಗೆ ಪೋನ ಮಾಡಿ ಒತ್ತಡ ಹಾಕಿ ಯುವಕರನ್ನು ಬಿಡಿಸಿಕೊಂಡು ಬರುವುದರಿಂದ ಯುವಕರಿಗೆ ಭಯ ಇಲ್ಲದಾಗಿದೆ.
ಇದು ಸಣ್ಣ ಪ್ರಮಾಣದಲ್ಲಿ ಗ್ರಾಮದಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ಆಗುತ್ತಿದ್ದು ಗಾಂಜಾ ಸೇವನೆ ಮಾಡಿದ ಯುವಕರು ರಸ್ತೆಯಲ್ಲಿ ತಿರುಗಾಡುವ ಮಹಿಳೆಯರಿಗೆ ರಸ್ತೆ ಬಿಡದೆ ಅಡ್ಡಲಾಗಿ ನಿಂತ್ತಿರುತ್ತಾರೆ ಅಲ್ಲದೆ ರಾತ್ರಿ ೧೨ ಗಂಟೆಯ ತನಕ ಗಾಂಜಾ ನಿಸೇಯಲ್ಲಿ ತಿರುಗಾಡುತ್ತಿದ್ದು ಇವರಿಗೆ ಯಾರ ಭಯವಿಲ್ಲದೆ ನೇಸೆಯಲ್ಲಿ ಕಳ್ಳತನ ಮಾಡುತ್ತಿದ್ದಾರೆ ಇದಕ್ಕೆ ಕೂಡಲೆ ಬಳಗಾನೂರು ಠಾಣೆಯ ಪಿಎಸ್‌ಐ ಕ್ರಮ ಕೈಗೊಂಡು ಕಡಿವಾಣ ಹಾಕಿ ಗಾಂಜಾ ಮಾರಾಟದ ಜಾಲ ಪತ್ತೆ ಹಚ್ಚಬೇಕು ಇಲ್ಲದಿದ್ದರೆ ಮುಂದೆ ಅಪಾಯ ಗ್ಯಾರಂಟಿ.