ಜವಳಗಾ: ನಾಳೆಯಿಂದ ಬಾಲೇಸಾಹೇಬ ಮುತ್ತ್ಯಾ ಜಾತ್ರೆ

ಕಲಬುರಗಿ,ಏ.22- ಕಮಲಾಪೂರ ತಾಲೂಕಿನ ಜವಳಗಾ (ಬಿ) ಗ್ರಾಮದ ಹಜರತ್ ಬಾಲೇಸಾಹೇಬ ಮುತ್ತ್ಯಾರ ಜಾತ್ರಾ ಮಹೋತ್ಸವ ನಾಳೆ ಏ.23ರಿಂದ 25ರ ವರೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ಜರುಗಲಿದೆ.
ನಾಳೆ ಏ.23ರ ಬೆಳಿಗ್ಗೆ ಶ್ರೀಹನುಮಾನ ದೇವರಿಗೆ ರುದ್ರಾಭಿಷೇಕ, ಸಂಜೆ 6ರಿಂದ 9ರ ವರೆಗೆ ಧರ್ಮಸಭೆ ಜರುಗಲಿದ್ದು, ಈ ಕಾರ್ಯಕ್ರಮಕ್ಕೆ ಶಹಾಪುರದ ರೋಜಾಮಠ ಮಲ್ಲಿಕಾರ್ರ್ಜುನ ಮುತ್ತ್ಯಾ ಅವರು ಚಾಲನೆ ನೀಡಲಿದ್ದಾರೆ.
ಕಲಬುರಗಿ ಶೇಖ ರೋಜಾದ ಡಾ.ಶೇಖ ಶಾ ಮೊಹ್ಮದ ಅಫಜಲೊದ್ದೀನ ಜುನೇದ, ನಿಲೂರಿನ ಪೂಝ್ಯ ಶರಣಯ್ಯ ಮಹಾಸ್ವಾಮಿಗಳು, ನೀಲೂರ ಇಸ್ಲಾಮೊದ್ದೀನ ಅಹ್ಮದ ಖಾದ್ರಿ, ತಿಂಥಣಿಯ ಶ್ರೀಲಿಂಗ ಬೀರದೇವರು, ಚಿಂಚನಸೂರಿನ ಗಂಗಾಧರ ಶಿವಾಚಾರ್ಯರು, ಸೇರಿದಂತೆ ಹರಗುರು ಚರಮೂರ್ತಿಗಳು ಪಾಲ್ಗೊಳ್ಳಲಿದ್ದಾರೆ ಅಧ್ಯಕ್ಷತೆಯನ್ನು ರಾಜಕುಮಾರ ಪಾಟೀಲ ವಹಿಸುವರು.
ಏ.23ರ ರಾತ್ರಿ 10ಕ್ಕೆ ಹಜರತ್ ಬಾಲೇಸಾಹೇಬ ದೇವರಿಗೆ ಶ್ರೀಗಂಧ ಸಂದಲ ಲೇಪನ, ಏ.24ರಂದು ದೇವರಿಗೆ ನೈವಿದ್ಯ ಹರಕೆ ಅರ್ಪಣೆ, ರಾತ್ರಿ 8ಕ್ಕೆ ರಸ ಮಂಜರಿ, ದೀಪೋತ್ಸವ, ಮದ್ದು ಸುಡುವುದು, ಏ.25ರಂದು ಜಂಗಿ ಕುಸ್ತಿ ಸ್ಪರ್ಧೆ, ರಾತ್ರಿ ಡ್ಯಾನ್ಸ ಮತ್ತು ಸಂಗೀತ ನೃತ್ಯ ನರುಗಲಿದೆ ಎಂದು ಜಾತ್ರ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.