ಜವಳಗಾ(ಬಿ); ಏ. 6 ರಿಂದ 8 ರವರೆಗೆ ಶ್ರೀ ಹಜರತ್ ಬಾಲೇಸಾಹೇಬ ಜಾತ್ರಾ ಮಹೋತ್ಸವ

ಕಲಬುರಗಿ;ಎ.5: ಜಿಲ್ಲೆಯ ಕಮಲಾಪೂರ ತಾಲ್ಲೂಕಿನ ಜವಳಗಾ (ಬಿ) ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಹಜರತ್ ಬಾಲೇಸಾಹೇಬ ದೇವರ ಜಾತ್ರಾ ಮಹೋತ್ಸವವು ಹಿಂದು ಮತ್ತು ಮುಸ್ಲಿಂ ಭಾಂಧವರು ಒಂದುಗೂಡಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದಿನಾಂಕ 06-04-2023 ಗುರುವಾರಂದು ನಿಮಿತ್ಯವಾಗಿ ಧಾರ್ಮಿಕ ಸಭೆ ಹಾಗೂ ಜಾತ್ರಾ ಕಾರ್ಯಕ್ರಮ ಉದ್ಘಾಟಕರಾಗಿ ಜೈ ಭಾರತ ಸೇವಾ ಸಮಿತಿ (ರಿ) ಅಧ್ಯಕ್ಷರಾದ, ಪೂಜ್ಯ ಶ್ರೀ ಮಲ್ಲಯ್ಯ ಮುತ್ಯಾ ನಿರಗುಡಿ
ಆಗಮಿಸುವರು.

ಚಿಂಚನಸೂರ ಸಂಸ್ಥಾನ ಹಿರೇಮಠ ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯರು ಹಾಗೂ ಚಿಂಚನಸೂರ್
ಚಿಕ್ಕಮಠ ಶ್ರೀ ಷ.ಬ್ರ. ಸಿದ್ದಮಲ್ಲ ಶಿವಾಚಾರ್ಯ
ಅವರು ಕಾರ್ಯಕ್ರಮ ಸಾನಿದ್ಯ ವಹಿಸುವರು.ನೀಲೂರ ಹಿರೇಮಠ ಶ್ರೀ ಶರಣಯ್ಯ ಸ್ವಾಮಿಗಳು ಮತ್ತು ನರೋಣಾ ಹಾಗೂ ಗೋಳಾ(ಬಿ). ಹೊಸಮಠ ಶ್ರೀ ಚನ್ನಮಲ್ಲ ಸ್ವಾಮಿಗಳು ಗೌರವ ಉಪಸ್ಥಿತಿ ವಹಿಸುವರು.

ಜವಳಗಾ (ಬಿ). ಗ್ರಾಮದ ಶ್ರೀ ಜಗನಸಿಂಗ್ ಮುತ್ಯಾ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಗ್ರಾಮೀಣ ಶಾಸಕರಾದ ಶಾಸಕ ಬಸವರಾಜ ಬಿ. ಮತ್ತಿಮುಡ ಅವರು ಜ್ಯೋತಿ ಬೆಳಗಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾತ್ರಾ ಕಮಿಟಿ ಅಧ್ಯಕ್ಷರಾದ, ರಾಜಕುಮಾರ ಎ. ಪಾಟೀಲ ಜವಳಗಾ (ಬಿ) ಇವರು ವಹಿಸುವರು.

ವಿಶೇಷ ಆಹ್ವಾನಿತರಾಗಿ ವಿಧಾನ ಪರಿಷತ ಸದಸ್ಯರುಗಳಾದ ಬಿ. ಜಿ. ಪಾಟೀಲ, ಸುನೀಲ ವಲ್ಲಾಪುರ, ಶಶೀಲ ಜಿ. ನಮೋಶಿ ಹಾಗೂ ಮಾಜಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಮಹಮ್ಮದ ಅಜಗರ್ ಚುಲಬುಲ್ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರುಗಳು ಭಾಗವಹಿಸುವರು.

ದಿನಾಂಕ: 07-04-2023 ಶುಕ್ರವಾರ ಸಾಯಂಕಾಲ ಬೆಂಗಳೂರು ಹಾಗೂ ಹುಮನಾಬಾದ ಸಾನ್ವಿ ಮೆಲೋಡಿಸ್ ತಂಡದವರಿಂದ ರಸಮಂಜರಿ ಮತ್ತು ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ. ತದನಂತರ ರಾತ್ರಿ ಜರುಗುವ ದೀಪೆÇೀತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರೇವೂನಾಯಕ ಬೆಳಮಗಿ ಹಾಗೂ ಬಿಜೆಪಿ ಮುಖಂಡ ಶಿವಕಾಂತ ಮಹಾಜನ ಸೇರಿದಂತೆ ಇತರರು ಭಾಗವಹಿಸುವರು.

ದಿನಾಂಕ ; 08-04-2023 ರಂದು ಶನಿವಾರ ಮುಂಜಾನೆ 8 ಗಂಟೆಯಿಂದ ಮಧ್ಯಾಹ್ನ 03 ಗಂಟೆಯವರೆಗೆ ಗೀಗಿ ಪದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲ 8 ಗಂಟೆಯವರೆಗೆ ಜಂಗಿ ಪೈಲ್ವಾನರಿಂದ ಕುಸ್ತಿ ಕಾರ್ಯಕ್ರಮ ಜರುಗಲಿದೆ. ಉದ್ಘಾಟಕರಾಗಿ ಪ್ರಥಮ ದರ್ಜೆ ಗುತ್ತಿಗೆದಾರ ರಾಜಕುಮಾರ ಎಂ.ಚವ್ಹಾಣ ಹಾಗೂ ಸತೀಶ ಸೊರಡೆ ಮುಗಳಿ ಅವರು ಆಗಮಿಸಲಿದ್ದಾರೆ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ರಾಜಕುಮಾರ ಎ. ಪಾಟೀಲ ಜವಳಗಾ (ಬಿ) ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.