ಜವನಗರ ತಾಂಡಾಕ್ಕೆ ಸಾರಿಗೆ ಬಸ್ ಸೇವೆ ಒದಗಿಸಲು ಆಗ್ರಹ

ಚಿಂಚೋಳ್ಳಿ,ಜು.15- ತಾಲೂಕಿನ ಗಡಿಭಾಗ ಜವನಗರ ತಾಂಡದ ವಿದ್ಯಾರ್ಥಿಗಳಿಗೆ ಮುಂಜಾನೆ ಮತ್ತು ಮದ್ಯಾನದ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ಬಹುಜನ ವಿದ್ಯಾರ್ಥಿ ಫೆÇೀರ್ಸ್ (ಬಿವ್ಹಿಎಫ್) ತಾಲೂಕ ಸಮಿತಿ ನೆತೃತ್ವದಲ್ಲಿ ಇಲ್ಲಿನ ಚಿಂಚೋಳಿ ಬಸ್ ಡಿಪೆÇೀ ವ್ಯವಸ್ಥಾಪಕರಿಗೆ ಜವನಗರ ತಾಂಡದ ವಿದ್ಯಾರ್ಥಿಗಳು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ಬಹುಜನ ವಿದ್ಯಾರ್ಥಿ ಫೆÇೀರ್ಸ್ ತಾಲೂಕ ಉಪಧ್ಯಕ್ಷ ಅಜರೋದ್ದಿನ ಎಮ್ ಎಮ್ ಕೆ. ರಾಜ್ಯ ಮಾಹಿತಿ ಹಕ್ಕು ಮಹಿಳಾ ಘಟಕ ತಾಲೂಕ ಅಧ್ಯಕ್ಷ ಅಂಕಿತಾ ಕಮಲಕರ್. ಬಹುಜನ ವಿದ್ಯಾರ್ಥಿಫೆÇೀರ್ಸ್ ತಾಲೂಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣು ಟಿ ಟಿ. ವಿದ್ಯಾರ್ಥಿಗಳದ ಹರ್ಷವರ್ಧನ್ ಚಿಮ್ಮನಕಟ್ಟಿ, ಇಬ್ರಾಹಿಂ. ಘೆಮ್ ಸಿಂಗ್ ರಾಠೋಡ, ಅರವಿಂದ ರಾಠೋಡ, ಇನ್ನು ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.