“ಜಲ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಕಾರ್ಯದರ್ಶಿ ಜಿ,ಎಸ್,ಸುರೇಶ್”

ಹೊಳಲ್ಕೆರೆ.ಮಾ.೨೨; ಪಟ್ಟಣದ ಎ.ಪಿ.ಎಂ.ಸಿ ಕಚೇರಿಯ ಸಭಾಂಗಣದಲ್ಲಿ  ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಯಿತು,ಸಮಿತಿಯ ಕಾರ್ಯದರ್ಶಿ ಜಿ,ಎಸ್,ಸುರೇಶ್ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರದಲ್ಲಿ ಮಾತನಾಡಿದ ಅವರು ಪ್ರಕೃತಿಯ ಅತ್ಯಮೂಲ್ಯ ಕೊಡುಗೆ ಜಲ ಇದರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ.ನೀರು ಮಾನವ ಸಂಕುಲಕ್ಕೆ ಅತ್ಯವಶ್ಯಕ ಇದನ್ನು ಹಿತ-ಮಿತ ಬಳಕೆ ಇಂದಿನ ಜಗತ್ತಿಗೆ ಅನಿವಾರ್ಯವಾಗಿದೆ.ಮಾನವ ಹಾಗೂ ಪ್ರಾಣಿ-ಪಕ್ಷಿ ಸಂಕುಲ ಆಹಾರವಿಲ್ಲದೆ ಹಲವಾರು ದಿನಗಳು ಬದುಕಬಹುದು ಆದರೆ ಕುಡಿಯುವ ನೀರಿಲ್ಲದೆ ಒಂದು ದಿನ ಬದುಕುವುದು ಅತೀ ಕಷ್ಟದ ಮಾತು ತಿನ್ನಲು ಆಹಾರವಿಲ್ಲದಿದ್ದರೂ ಸಹ ಕುಡಿಯುವ ನೀರು ನಮ್ಮ ಜೀವವನ್ನು ಹಲವು ದಿನಗಳ ಕಾಲ ಉಳಿಸುವ ಸಂಜೀವಿನಿಯೇ ಸರಿ,ಪ್ರತಿ ಜೀವ ಸಂಕುಲಕ್ಕೆ ನೀರು ಎಂಬುದು ಪ್ರಕೃತಿ ನೀಡಿರುವ ಜೀವಹನಿ.ಅಮೃತ.ಮನುಷ್ಯನ ಅತಿಯಾದ ದುರಾಸೆಯಿಂದಾಗಿ ತೀವ್ರ ಗತಿಯಲ್ಲಿ ಅರಣ್ಯನಾಶ,ಮಿತಿಮೀರಿದ ಮಾಲಿನ್ಯ ಪ್ರಾಕೃತಿಕ ಸಂಪನ್ಮೂಲಗಳ ಅವ್ಯಾಹತ ಬಳಕೆ,ಪರಿಸರದ ಮೇಲೆ ತೋರುತ್ತಿರುವ ಕ್ರೌರ್ಯದಿಂದಾಗಿ ಪ್ರತಿ ಕ್ಷಣ ಹಸಿರು ಮನೆಯ ಪರಿಣಾಮ ಹೆಚ್ಚಾಗುತ್ತ ಸಾಗಿದೆ.ಇದರಿಂದ ಭೂಮಿ ಮೇಲಿನ ತಾಪಮಾನ ದಿನೇ ದಿನೇ ತ್ವರಿತಗತಿಯಲ್ಲಿ ಏರಿಕೆಯಾಗುತ್ತಿದೆ,ಗಿಡ-ಮರಗಳ ಸಂತತಿ ಕ್ಷೀಣವಾಗಿ ಇಡೀ ಭೂಮಿ ಬಂಜರು ಪ್ರದೇಶವಾಗಿ ಮಾರ್ಪಾಡುತ್ತಿದೆ.ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವುದನ್ನು ಕಾಣಬಹುದಾಗಿದೆ.ಆದ ಪ್ರಯುಕ್ತ ಜಲ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು,   ಕಾರ್ಯಕ್ರಮದಲ್ಲಿ ಪರಿಸರ ಮತ್ತು ಜಲ ಸಂರಕ್ಷಣೇ ಕುರಿತು ಪ್ರತಿಜ್ಞಾವಿಧಿ ಭೋದಿಸಲಾಯಿತು“ಜಲವೇ ಜೀವ ಜಲ,ನೀರಿನ ರಕ್ಷಣೆ ಸಂರಕ್ಷಣೆ ನಮ್ಮೆಲ್ಲರ ಹೊಣೆ,ನೀರನ್ನು ಮಿತವಾಗಿ ಬಳಸಿ,ಭವಿಷ್ಯಕ್ಕಾಗಿ ಉಳಿಸಿ ಅಂತರ್ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ,ಜಲಮೂಲಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ,ಹಸಿರೇ ಉಸಿರು,ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ” ಎಂದು ಪ್ರತಿಜ್ಞಾನ ವಿಧಿ ಭೋದಿಸಲಾಯಿತು.ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯದರ್ಶಿ ಎ.ಜಿ.ಸುರೇಂದ್ರಬಾಬು ಆಂತರಿಕ ಲೆಕ್ಕ ಪರಿಶೋಧಕ ಹೆಚ್.ಎನ್,ನಾಗರಾಜ ಭದ್ರತಾ ಸಿಬ್ಬಂದಿ ಎ,ಸಂತೋಷ್,ಜಿ.ಬಸವರಾಜ್.ಹೆಚ್.ಚಂದ್ರಹಾಸ್  ಮುಂತಾದವರು ಭಾಗವಹಿಸಿದ್ದರು.