ಜಲ ಸಂರಕ್ಷಣೆ ಎಲ್ಲರ ಹೊಣೆ

ಭಾಲ್ಕಿ:ಮಾ.24: ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವವಾಗದಂತೆ ಜಲ ಸಂರಕ್ಷಣೆ ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಿಆರ್‍ಪಿ ಶಕುಂತಲಾ ಅಭಿಪ್ರಾಯಪಟ್ಟರು.

ಇಲ್ಲಿನ ಸುಭಾಷ ಚೌಕ್‍ನಲ್ಲಿರುವ ಶಾರದಾ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದ ವಿಶ್ವ ಜಲ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಕಾಡುಗಳ ಅಭಾವದಿಂದ ನೀರಿನ ಅಂತರ್ಜಲಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಸಂಗತಿ ಚಿಂತಾಜನಕವಾಗಿದೆ.ಅಂರ್ಜಲ ಮಟ್ಟ ಹೆಚ್ಚಿಸಲು ಇಂಗು ಗುಂಡಿಗಳ ನಿರ್ಮಾಣ,ಮಳೆ ನೀರಿನ ಕೊಯ್ಲು,ಕೆರೆಗಳಲ್ಲಿನ ಹೂಳೆತ್ತುವಿಕೆ ಕಾರ್ಯ ನಡೆಯಬೇಕಾಗಿದೆ.ನೀರು ವ್ಯರ್ಥ ಪೋಲಾಗದಂತೆ ನಿಗಾವಹಿಸಬೇಕು.ನೀರು ಹಿತಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.ಪ್ರಾಚಾರ್ಯ ಅಶೋಕ ರಾಜೋಳೆ,ಸಿಆರ್‍ಪಿ ಅಂಬ್ರೀಶ ಖಂಡ್ರೆ ನೀರಿನ ಪ್ರಾಮುಖ್ಯತೆ ಕುರಿತು ಮಾತನಾಡಿದರು.

ಶಾರದಾ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ವಸಂತರಾವ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು.

ಭಾಷಣ ಸ್ಪರ್ಧೆ:ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ `ವಿಶ್ವ ಜಲ ದಿನಾಚರಣೆ’ ಅಂಗವಾಗಿ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ನ್ಯಾಯವಾದಿ ಉತ್ತಮ ಪುರಿ,ಪ್ರತಿಭಾ ಪಾಟೀಲ,ಅಶ್ವೀನಿ ಮಾರುತಿ,ಅಶ್ವೀನಿ ರಾಜಕುಮಾರ,ಅಶ್ವೀನಿ ಚಿದ್ರೆ,ಅನುರಾಧಾ ಟಿ.,ಪೂಜಾ ಧನಾಜಿರಾವ,ಶಾಹು ಧನಾಜಿರಾವ,ಜ್ಯೋತಿ ತಾನಾಜಿ,ನಾಗರಾಜ,ಸುಮಿತ್ರಾ ವಿಕಾಂತ,ವಾಣಿ,ಪೂಜಾ ಮೆಗರಾಜ,ಕೋಮಲ ವಿಕ್ರಮ್ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.

ಪ್ರಾಚಾರ್ಯ ವೈಶಾಲಿ ರಾಜೋಳೆ ಸ್ವಾಗತಿಸಿದರು.ಶಿಕ್ಷಕ ಅಶೋಕ ನಿರೂಪಿಸಿದರು.ತಾನಾಜಿ ತುಕದೆ ವಂದಿಸಿದರು.