ಜಲ ಸಂಪನ್ಯೂಲ ಬಹಳ ಸೂಕ್ಷ್ಮ ವಿಚಾರ


ಧಾರವಾಡ,ಏ19 : ಹರಿಯುವ ನೀರನ್ನು ನಡೆಯುವ ಹಾಗೆ ಮಾಡಬೇಕು, ನಡೆಯುವ ನೀರನ್ನು ನಿಲ್ಲುವ ಹಾಗೆ ಮಾಡಬೇಕು, ನಿಲ್ಲುವ ನೀರನ್ನು ಭೂಮಿಯಲ್ಲಿ ಇಂಗಿಸಬೇಕು ಅಂದಾಗ ಮಾತ್ರಜಲಕ್ಷಾಮವನ್ನುತಡೆಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ಮುಂದೊಂದು ದಿನ ನೀರನ್ನುರೇಷನ್‍ಅಂಗಡಿಯಲ್ಲಿ ಪಡೆಯುವ ಪರಿಸ್ಥಿತಿ ಬಂದರೆಆಶ್ಚರ್ಯವಿಲ್ಲ ಎಂದುಬೆಳಗಾವಿಯ ವಿಶ್ವೇಶ್ವರತಾಂತ್ರಿಕ ವಿಶ್ವವಿದ್ಯಾಲಯ ಸಿವ್ಹಿಲ್ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕಡಾ. ಆನಂದ ಶಿವಪುರ ಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ.ಎಂ.ಆರ್. ಕುಂಭಾರದತ್ತಿ ಅಂಗವಾಗಿ ಆಯೋಜಿಸಿರುವ ಉಪನ್ಯಾಸ ಮಾಲೆ-8ರಲ್ಲಿ ‘ಜಲ ಸಂಪನ್ಮೂಲ ಮಾಹಿತಿ’ ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಜಲಸಂಪನ್ಮೂಲ ಬಹಳ ಸೂಕ್ಷ್ಮವಾದ ವಿಚಾರ.ಮಳೆ ಆಗುವುದಕ್ಕಿಂತ ಮೊದಲುಚರ್ಚೆಆರಂಭವಾಗುತ್ತದೆ.ಮಳೆ ಆದ ನಂತರವೂಕೂಡಚರ್ಚೆಆಗುತ್ತದೆ.ಭಾರತದಲ್ಲಿ 13 ನದಿಗಳಲ್ಲಿ 8 ಜಲಸಂಪನ್ಮೂಲದ ನದಿಗಳ ಕುರಿತು ವಾದ ವಿವಾದಕೋರ್ಟನಲ್ಲಿದೆ.ಮುಂದೆಯುದ್ಧವಾದರೆ ನೀರಿನ ಸಲುವಾಗಿಯೇಯುದ್ಧವಾಗಬಹುದು.ವಿಶ್ವದಲ್ಲಿ ಹೆಚ್ಚು ನೀರಿರುವದೇಶಐಸಲ್ಯಾಂಡ್, ಬೆಗನ್ನ, ಕೆನಡಾ, ನಾರ್ವೆ, ಪನಾಮ ಹೀಗೆ ಒಟ್ಟು 10 ದೇಶಗಳಿವೆ. ಕಡಿಮೆ ನೀರಿರುವುದು ಸೌದಿ ಅರೇಬಿಯಾ, ಶಿಂಗಾಪೂರ, ಇಸ್ರೆಲ್, ಓಮರ್, ಹೀಗೆ ಹಲವಾರು ದೇಶಗಳು ನೀರಿನಕೊರತೆಅನುಭವಿಸುತ್ತಿವೆ.
ಹಾಗಾದರೆ ಭಾರತಎಲ್ಲಿಇದೆ. ಬೇರೆ ಬೇರೆ ವಿಧದಲ್ಲಿ ನೀರಿನ ಸಂಪನ್ಮೂಲವಿದೆ.ಜಗತ್ತಿನಲ್ಲಿ 0009% ಶುದ್ಧ ನೀರು ಮಾತ್ರಇದೆ. ಅಂತರ್ಜಲದಿಂದ 8 ಕಿಲೋಮೀಟರವರೆಗೆ ನೀರನ್ನ ಪಡೆಯಬಹುದು.ಮಳೆ ಬಂದಾಗ ಕೃಷಿಗೆ ಸಂಬಂಧಿಸಿದ ನೀರಿನ .005% ಮಾತ್ರ.ಸಮುದ್ರದಲ್ಲಿ 97.2% ನೀರಿದೆ.ಅದುಉಪ್ಪಿನ ನೀರು.ಸಮುದ್ರದ ನೀರು ಸಿಹಿಯಾಗಿದ್ದರೆ ಎಲ್ಲ ನೀರು ಆವಿ ಆಗಿ ಹೋಗುತ್ತಿತ್ತು. ಹಾಗಾಗಿ ನಿಸರ್ಗ ಆ ನೀರಿನಲ್ಲಿಉಪ್ಪಿನಂಶವಿಟ್ಟಿದೆ. ಹೀಗಾಗಿ ನೀರಿನ ಪ್ರಮಾಣ ಉಳಿದುಕೊಂಡಿದೆ
ಮಣ್ಣು 43 ಮಿಲಿಯನ್ ಹೆಕ್ಟೆರ್ ಮೀಟರ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ.ಇದರ ಮೇಲೆಯೇರೈತರಜೀವನ ನಿಂತಿದೆ.ಅಂತರ್ಜಲದಿಂದ 27 ಮಿಲಿಯನ್ ಹೆಕ್ಟೆರ ಮೀಟರ ನೀರನ್ನು ಮಾತ್ರ ಪ್ರತಿವರ್ಷ ಹೊರಗಡೆತೆಗೆಯಬಹುದು.4000 ಕ್ಯೂಬಿಕ್‍ಕಿಲೋಮೀಟರ ಭಾರತದಲ್ಲಿ ನೀರು ಬರುತ್ತದೆ.7 ಕ್ಯೂಬಿಕ್‍ಕಿಲೋಮೀಟರ ನೀರು ನಿಸರ್ಗಕ್ಕೆ ವಾಪಸ್ ಹೋಗುತ್ತದೆ.2150 ಕ್ಯೂಬಿಕ್‍ಕಿಲೋಮೀಟರ ನೀರು ಇಂಗಿ ಹೋಗತ್ತದೆ.1150 ಕ್ಯೂಬಿಕ್‍ಕಿಲೋಮೀಟರ ನೀರು ನದಿಯಲ್ಲಿ ಸರಾಗವಾಗಿ ಹರಿದು ಹೋಗುತ್ತದೆ.1800 ಕ್ಯೂಬಿಕ್‍ಕಿಲೋಮೀಟರ ಹರಿತಕ್ಕಂತ ನೀರು ನೇಪಾಳ ಮತ್ತಿತರ ದೇಶಗಳಿಂದ ಹರಿದು ಬರುತ್ತದೆ.150 ಕ್ಯೂಬಿಕ್‍ಕಿಲೋಮೀಟರ ನೀರನ್ನು ಮಾತ್ರ ನೀರನ್ನು ಹಿಡಿದುಇಡುತ್ತೇವೆ. ಉಳಿದ ನೀರು ಸಮುದ್ರಕ್ಕೆ ಸೇರುತ್ತದೆ.ಹೀಗಾಗಿ ನೀರಿನ ಸಮರ್ಪಕ ಬಳಕೆ ಆಗುತ್ತಿಲ್ಲ. 2001 ರಿಂದ ನೀರಿನಕೊರತೆ ಹೆಚ್ಚಾಗಿದ್ದರಿಂದ ಸಾರ್ವಜನಿಕರಲ್ಲಿಒತ್ತಡಆರಂಭವಾಯಿತುಎಂದಅವರು ಪ್ರೊ.ಎಂ.ಆರ್. ಕುಂಭಾರ ವಿದ್ಯಾರ್ಥಿಗಳೊಂದಿಗೆ ಸದಾ ಪ್ರೀತಿ ವಿಶ್ವಾಸದಿಂದಇರುತ್ತಿದ್ದರು.ಗುರುಗಳ ಹೆಸರಿನಲ್ಲಿದತ್ತಿಇಟ್ಟು ಆ ಮೂಲಕ ಗುರುಕಾಣಿಕೆ ಸಲ್ಲಿಸುತ್ತಿರುವುದು ಶ್ಲಾಘನೀಯವಾದುದುಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡುತ್ತಾ, ಕೆರೆ, ಹಳ್ಳ, ಬಾವಿಗಳಲ್ಲಿ ನೀರುಯಥೇಚ್ಚವಾಗಿ ಸೇರಬೇಕಾದರೆ ನೀರು ಇಂಗಿಸುವ ಕೆಲಸ ವ್ಯವಸ್ಥಿತವಾಗಿ ಮಾಡಬೇಕೆಂದುಕರೆಕೊಟ್ಟರು. ಹಲವಾರು ಕೆರೆಗಳನ್ನು ಉಳಿಸಲು ಪ್ರಯತ್ನಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಬೆಳಗಾವಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗ ಹಾಗೂ ಗ್ರಂಥಾಲಯದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕಡಾ. ವಿನಾಯಕ ಬಂಕಾಪುರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶಂಕರ ಕುಂಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಮಹೇಶ ಹೊರಕೇರಿ ನಿರೂಪಿಸಿದರು.ಪ್ರೊ.ಎಸ್.ಎಲ್. ಸಂಗಮ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್.ಸಿ. ಪಾಟೀಲ, ಸತ್ಯ ಸವಣೂರ, ಮಹಾಂತೇಶ ನರೇಗಲ್, ಡಿ.ಬಿ. ಬಿರಾದಾರ, ಎಸ್.ಜಿ. ಬೆಟಗೇರಿ, ಎಸ್.ಕೆ.ಕುಂದರಗಿ, ಎಸ್.ಬಿ. ಪಾಟೀಲ, ಕುಂಭಾರ ಪರಿವಾರದವರು ಸೇರಿದಂತೆ ಮುಂತಾದವರಿದ್ದರು.