ಜಲ ಸಂಪನ್ಮೂಲ ಖಾತೆಗಾಗಿ ರಮೇಶ್ ಜಾರಕಿಹೊಳಿ ಸಿಲುಕಿಸಲಾಗಿದೆ: ಯತ್ನಾಳ್ ಹೊಸ ಬಾಂಬ್

ವಿಜಯಪುರ, ಮಾ.21-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ‌ ಜಲಸಂಪನ್ಮೂಲ ಖಾತೆ ಬೇಕಾಗಿತ್ತು. ಆದ್ದರಿಂದಲೇ ರಮೇಶ್ ಜಾರಕಿಹೊಳಿ ಅವರನ್ನು ಸಿಲುಕಿಸಲಾಗಿದೆ ಎಂದು ಬಿಜೆಪಿ ಶಾಸಕ ಬಸ‌ನಗೌಡ ಪಾಟೀಲ್ ಯತ್ಯಾಳ್ ವಿವಾದದ ಬಾಂಬ್ ಸಿಡಿಸಿದ್ದಾರೆ.
ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ರಿರುವಾಗಲೇ ಯತ್ನಾಳ್ ಹೇಳಿಕೆ ರಾಜ್ಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ನಗರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ತಿಗಳಿಗೆ ಜಲ ಸಂಪನ್ಮೂಲ, ಇಂಧನ,ಹಣಕಾಸು ಹಾಗೂ ಬೆಂಗಳೂರು ಅಭಿವೃದ್ಧಿ ಇಲಾಖೆ ತಮ್ಮಲ್ಲಿಯೇ ಉಳಿಯಬೇಕಾಗಿದೆ. ಮಾರ್ಚ್‌ ಕೊನೆಯಲ್ಲಿ ಈ ಖಾತೆಗಳಿಗೆ ಸಾವಿರಾರು ಕೋಟಿ ರೂ ಹಣ ಬಿಡುಗಡೆ ಯಾಗಲಿದ್ದು ಆ ಹಣ ಹೇಗೆ ತೆಗೆದುಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳು ಯೋಜನೆ ರೂಪಿಸಿದ್ದರು ಎಂದು ಆರೋಪಿಸಿದ್ದಾರೆ.
ಇದೇ‌ ಕಾರಣಕ್ಕಾಗಿ ರಮೇಶ್ ಜಾರಕಿಹೊಳಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಗುರುತರ ಆರೋಪ ಮಾಡಿದ್ದಾರೆ.
ಈ ಹಿಂದೆ ಜಾರಕಿಹೊಳಿ ಅವರಿಗೆ ಅನಿವಾರ್ಯವಾಗಿ ಆ ಖಾತೆ ಕೊಟ್ಟರು. ಈಗ ಆ ಖಾತೆಯನ್ನು ಗೋವಿಂದ ಕಾರಜೋಳ, ಬೊಮ್ಮಾಯಿ, ಆರ್. ಅಶೋಕ ಅವರಿಗೆ ಹೆಚ್ಚುವರಿಯಾಗಿ ನೀಡಬಹುದಿತ್ತು. ಆದರೆ, ಸಿಎಂ ಗೆ ಮೂರು ಇಲಾಖೆಗಳನ್ನೂ ಮಗ ವಿಜಯೇಂದ್ರನ ಕೈಗೆ ಕೊಡಬೇಕಾಗಿದೆ. ಹೀಗಾಗಿ ಮತ್ತೆ ಈ ಖಾತೆಗಳನ್ನು ಇಟ್ಟುಕೊಂಡಿದ್ದಾರೆ” ಎಂದು ಯತ್ನಾಳ್ ಗುಡುಗಿದ್ದಾರೆ.
400 ಸಿಡಿಗಳಿರುವ ಬಗ್ಗೆ ವಿಧಾನಸೌಧದ ಮೊಗಸಾಲೆಯಲೆಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದ್ದಾರೆ.