ಜಲ ಸಂಜೀವಿನಿ ಕುರಿತು ತರಬೇತಿ

ಸಿರವಾರ.ಸೆ.೨೧- ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ “ಜಲ ಸಂಜೀವಿನಿ” ತರಬೇತಿ ಹಮ್ಮಿಕೊಳ್ಳಲಾಯಿತು.
ಎಫ್‌ಇಎಸ್ ಸಂಸ್ಥೆಯ ಸಂಯೋಜಕ ಶಂಕರಗೌಡ ಅವರು ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಸರ್ಕಾರಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಅತಿ ಹೆಚ್ಚು ಅನುದಾನಗಳನ್ನು ಉಪಯೋಗಿಸಿಕೊಳ್ಳಲು ಅವಕಾಶಗಳನ್ನು ನೀಡಲಾಗಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಮಣ್ಣು ಮತ್ತು ನೀರು ಸಂರಕ್ಷಣೆಯ ಕಾಮಗಾರಿಗಳನ್ನು ವೈಜ್ಞಾನಿಕವಾದ ಪದ್ದತಿ ಮತ್ತು ಪ್ರಕ್ರಿಯೆಯಲ್ಲಿ ಜಿಐಎಸ್, ಕ್ಲಾರ್ಟ, ದಿಶಾಂಕ, ಕೆಜಿಐಎಸ್, ತಂತ್ರಾಂಶದ ಮೂಲಕ ಯೋಜನೆ ರೂಪಿಸುವುದು. ಗೋಮಾಳ ಪ್ರದೇಶ ಅಭಿವೃದ್ಧಿ ಪಡಿಸುವುದು ಸೇರಿ ಕರಡು ಯೋಜನಾ ತಯಾರಿಕೆಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿ ಸನ್ನದ್ದರಾಗಬೇಕೆಂದರು.
ಈ ಸಂದರ್ಭದಲ್ಲಿ ತಾಲೂಕ ಕೃಷಿ ಸಹಾಯಕ ನಿರ್ದೇಶಕರು, ತಾಲೂಕಿನ ಎಲ್ಲಾ ಪಿಡಿಒ, ತಾಲೂಕಿನ ಐಇಸಿ, ಎಂಐಎಸ್, ತಾಂತ್ರಿಕ ಸಂಯೋಜಕರು, ಸಹಾಯಕರು, ಬಿ.ಎಫ್ಟಿ, ಜಿಕೆಎಮ್ ರವರು ಇದ್ದರು.