ಜಲ ಶಕ್ತಿ ಕಾಮಗಾರಿಯನ್ನು ವೀಕ್ಷಿಸಿದ ಕೇಂದ್ರ ಅಧ್ಯಯನ ತಂಡ    


ಸಂಜೆವಾಣಿ ವಾರ್ತೆ
ಕುಕನೂರು, ಜು.28: ಕುಕನೂರ ತಾಲೂಕಿನ ವ್ಯಾಪ್ತಿಯಲ್ಲಿ ಪ್ರಾರಂಭಗೊಂಡಿರುವ ಜಲಶಕ್ತಿ ಕಾಮಗಾರಿಗಳನ್ನು ಭಾರತ ಸರ್ಕಾರದ ಜಲಶಕ್ತಿ ಮಂತ್ರಾಲಯದಿಂದ ಆಗಮಿಸಿದ ತಂಡವು, ಪರಿಶೀಲನೆ ಮಾಡಿತು.
ತಾಲೂಕಿನ ಬನ್ನಿಕೊಪ್ಪ ಮತ್ತು ಮಂಡಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಅವಲಿ ಕೆರೆಯನ್ನು ಪರಿಶೀಲಿಸಿದ ಪರಿಶೀಲನಾ ತಂಡದ ಮುಖ್ಯಸ್ಥರಾದ ಆರ್‌, ಮೈತಲಿ ಉಪ ಕಾರ್ಯದರ್ಶಿಗಳು ಬುಡಕಟ್ಟು ವ್ಯವಹಾರಗಳ ಮಂತ್ರಾಲಯ. ಕೇಂದ್ರ ಜಲಶಕ್ತಿ ಮಂತ್ರಾಲಯವು ಪ್ರತೀ ವರ್ಷ ಸರ್ಕಾರಿಂದ ಹಲವಾರು ಯೋಜನೆಗಳ ಮೂಲಕ ನೀರಿನ ಸಂರಕ್ಷಣೆಗೆ ಸಂಬಂದಿಸಿದಂತೆ ಹಲವಾರು ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಏನು ಬದಲಾವಣೆ ಕಂಡಿದೆ, ಎಂದು ಪರಿಶೀಲನೆ ನಡೆಸುತ್ತದೆ. ಇದೇ ವರ್ಷ ಅಮೃತ ಸರೋವರ ಮಾದರಿಯಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಆಯಾ ಪ್ರದೇಶದಲ್ಲಿ ಕುಡಿಯೋ ನೀರಿನ ಸಮಸ್ಯೆ ಬಗೆ ಹರಿಯಲಿದೆ ಎಂದರು ತಂಡದ ಮತ್ತೊಬ್ಬ ಸದಸ್ಯರಾದ ಜಯಪ್ರಕಾಶ ವಿಜ್ಞಾನಿಗಳು ನೀರು ಸಂರಕ್ಷಣೆ. ರವರು ಮಾತನಾಡಿ 75 ನೇ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ 90 ಕೆರೆಗಳನ್ನು ಅಮೃತ ಸರೋವರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ, ಇದು ಸಂತೋಷದ ವಿಷಯ ಎಂದರು. ಇದರಂತೆ ಉಳಿದ ಕೆರೆಗಳನ್ನು ಅಭಿವೃದ್ಧಿ ಮಾಡಬೇಕು, ಇದರ ಜೋತೆಗೆ ಜಲ ಸಂರಕ್ಷಣೆಯ ಇತರೆ ಅಂಶಗಳಾದ
1) ಮಳೆ ನೀರು ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲ ಕಾಮಗಾರಿಗಳು,
2)ಪಾರಂಪರಿಕ ಜಲ ಮೂಲಗಳ ಪುನಶ್ಚೇತನ,
3) ರಿ ಚಾರ್ಜ ಮಾದರಿಗಳು
4) ವಾಟರ್‌ ಶೆಡ್‌ ಡೆವೆಲಪ್‌ ಮೆಂಟ್‌
5) ಅರಣ್ಯೀಕರಣ.
ಸೇರಿದಂತೆ ಹಲವಾರು ಕಾಮಗಾರಿಗಳನ್ನು ಮಾಡಲು ಅವಕಾಶವಿದೆ ಅವುಗಳನ್ನು ಮಾಡಬೇಕು ಎಂದರು.
ನಂತರ ಅರಣ್ಯ ಇಲಾಖೆಯಿಂದ ನಡೆದ ಕಾಮಗಾರಿ ಬನ್ನಿಕೊಪ್ಪದಿಂದ ಮನ್ನಾಪೂರ ವರೆಗೆ ಅರಣ್ಯೀಕರಣ ಕಾಮಗಾರಿ, ಇಟಗಿ ಗ್ರಾಮ ಪಂಚಾಯತಿಯಲ್ಲಿ ನಿರ್ಮಾಣ ಮಾಡಿದ ಮಳೆ ನೀರು ಕೊಯ್ಲು ಕಾಮಗಾರಿ ವಿಕ್ಷಣೆ ಮಾಡಿ ಮೆಚ್ಚುಗೆ  ವ್ಯಕ್ತಪಡಿಸಿದರು.
ಸ್ಥಳದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಕುಕನೂರ ರಾಮಣ್ಣ ದೊಡ್ಮನಿ, ಕಾರ್ಯನಿರ್ವಾಹಕ ಅಧಿಕಾರಿಗಳು ಕಾರಟಗಿ ಡಾ. ಮೋಹನ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕೊಪ್ಪಳ ಆನಂದ ಕೆ.ಎಸ್‌. ವಲಯ ಅರಣ್ಯಾಧಿಕಾರಿಗಳಾದ ಅನಂತಕುಮಾರ ಪಾಕಿ, ಉಪ ವಲಯ ಅರಣ್ಯಾಧಿಕಾರಿಗಳಾದ ಬಾಬುರಾವ್‌ ಜಗತಾಪ್‌, ಅಂದಪ್ಪ ಕುರಿ, ಕೃಷಿ ಅಧಿಕಾರಿ ಪ್ರಾಣೇಶ್‌, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ರಾಠೋಡ, ಶರಣಪ್ಪ ಕೆಳಗಿನಮನಿ, ಪರಶುರಾಮ್‌ ನಾಯಕ್‌, ಜಿಲ್ಲಾ ಐ.ಇ.ಸಿ ಸಂಯೋಜಕ ಶ್ರೀನಿವಾಸ್‌ ಚಿತ್ರಗಾರ,  ತಾಲೂಕ ತಾಂತ್ರಿಕ ಸಂಯೋಜಕ ಸಂತೋಷ ನಂದಾಪೂರ, ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ತಾಂತ್ರಿಕ ಸಹಾಯಕರು, ಬಿ,ಎಫ್.ಟಿಗಳು, ಗ್ರಾಮ ಪಂಚಾಯತಿಯ ಸಿಬ್ಬಂದಿಳು ಹಾಜರಿದ್ದರು.