ಜಲ ಜೀವನ ಮಿಷನ್ ಹಾಗೂ ನರೇಗಾ ಯೋಜನೆ ಕಾಮಗಾರಿ ವಿಕ್ಷಿಸಿದ ಜಿ.ಪಂ ಸಿಇಓ ಗೋವಿಂದ ರೆಡ್ಡಿ

ಚಡಚಣ:ನ.24: ತಾಲ್ಲೂಕಿನ ವಿವಿಧ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ವಿಜಯಪುರ ಜಿಲ್ಲಾ ಪಂಚಾಯ್ತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಮತ್ತು ತಾಂ.ಪ ಸಂಜಯ್ ಕಡಿಗೆಕರ ಇಓ ಅಧಿಕಾರಿಗಳು ಮಗಳವಾರ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿಕ್ಷಣೆ ಮಾಡಿದರು.
ತಾಲ್ಲೂಕಿನ ಬರಡೋಲ, ಕೇರೂರ, ಲೋಣಿ(ಬಿ.ಕೆ), ಧೂಳಖೇಡ, ಹಲಸಂಗಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ, ಜಲ ಜೀವನ ಮಿಷನ್ (ಮನೆ ಮನೆಗೆ ಗಂಗಾ) ಯೋಜನೆಯ ಕಾಮಗಾರಿಗಳ ವಿಕ್ಷಿಸಿ ಪರಿಶೀಲನೆ ಮಾಡಿದರು…
ಇದೇ ವೇಳೆ ಮಹಾತ್ಮ ಗಾಂಧೀ ಉದ್ಯೊಗ ಖಾತ್ರಿ ಯೋಜನೆಯಡಿ ಶಾಲಾ ಕಂಪೌಂಡ, ಅಡುಗೆ ಕೊಣೆ, ಜೊತೆಗೆ ತಾ.ಪಂ ಅಭಿವೃದ್ಧಿ ಅನುದಾನದ ಕಾಮಗಾರಿಯನ್ನು ಪರಿಶೀಲಿಸಿದರು…ಬಳಿಕ ಜನರ ಜೊತೆ ಕೂಡಾ ಚರ್ಚಿಸಿ ಅಭಿಪ್ರಾಯ ಆಲಿಸಿದರು…
ಈ ಸಂದರ್ಭದಲ್ಲಿ ಂಇಇ ಖWS ರುದ್ರವಾಡಿ, ತಾಲ್ಲೂಕು ಯೋಜನಾಧಿಕಾರಿ ಶಿವದತ್ತ ಕೊಟ್ಟಲಗಿ,ಐ ಖಿ ರಾಥೋಡ್ ಇಂಜಿನಿಯರ್, ಮಹೇಶ ದೈವಾಡೆ ಹಾಜರಿದ್ದರು.