ಜಲ ಜೀವನ್ ಮೀಷನ್ ಯೋಜನೆಯಡಿ ಪ್ರತಿ ಮನೆಗೂ ಶುದ್ದನೀರು

ಹೊನ್ನಾಳಿ.ಜು.೧೬ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮೀಷನ್ ಯೋಜನೆಯಡಿ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ 52,102 ಮನೆಗಳಿಗೆ ಶುದ್ದ ನೀರು ಪೂರೈಕೆ ಮಾಡಲಾಗುವುದೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಜಲಜೀವನ್ ಮೀಷನ್ ಯೋಜನೆಯಡಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಮೊದಲ ಅಂತದಲ್ಲಿ 33 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿದ್ದು ಅದರಲ್ಲಿ 80 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಈಗಾಗಲೇ 39 ಕಾಮಗಾರಿಗಳು ಮುಕ್ತಾಯಗೊಂಡಿದ್ದು 41 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು. ಎರಡನೇ ಅಂತದಲ್ಲಿ 51 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಕಾಮಗಾರಿಗಳು ಆಯ್ಕೆಯಾಗಿದ್ದು ಈಗಾಗಲೇ ಎರಡೂ ಕಾಮಗಾರಿಗಳು ಪೂರ್ಣಗೊಂಡಿವೇ ಎಂದರು.ಮೂರನೇ ಅಂತದಲ್ಲಿ 96 ಹಳ್ಳಿಗಳನ್ನು ಆಯ್ಕೆ ಮಾಡಿದ್ದು ಪ್ರಸ್ತುತ 22 ಹಳ್ಳಿಗಳಿಗೆ ಜಲಜೀವನ್ ಮೀಷನ್ ಯೋಜನೆ ಕಾಮಗಾರಿಯ ಟೆಂಡರ್ ಪ್ರಕ್ರಿಯೇ ಪ್ರಗತಿಯಲ್ಲಿದೇ ಎಂದರಲ್ಲದೇ, ಉಳಿದ 74 ಹಳ್ಳಿಗಳ ಕಾಮಗಾರಿಗಳ ಬಗ್ಗೆ ಎಸ್ಟಿಮೇಷನ್ ಮಾಡಿಸುತ್ತಿದ್ದು ಅವುಗಳನ್ನು ಆದಷ್ಟು ಬೇಗ ಟೆಂಡರ್ ಕೆರೆದು ಕಾಮಗಾರಿ ಆರಂಭಿಸಲಾಗುವುದು ಎಂದರು.ಜಲಜೀವನ್ ಮೀಷನ್ ಯೋಜನೆಯ ಎಲ್ಲಾ ಕಾಮಗಾರಿಗಳನ್ನು 2023 ಕ್ಕೆ ಪೂರ್ಣಗೊಳಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದ ಶಾಸಕರು, ಅಧಿಕಾರಿಗಳು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು. ತಾಲೂಕಿನ ಬೇಲಿಮಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 30 ಲಕ್ಷ ರೂಪಾಯಿ ವೆಚ್ಚದ ಅಡುಗೆ ಕೋಣೆ ಹಾಗೂ ಊಟದ ಕೋಣೆಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕರು,ಗ್ರಾ.ಪಂ. ಕಟ್ಟಡದ ಕಾಂಪೌಂಡ್ ಹಾಗೂ ಪಶು ವೈದ್ಯಕೀಯ ಆಸ್ಪತ್ರೆಯ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಹಿರೇಗೋಣಿಗೆರೆ ಗ್ರಾಮದಲ್ಲಿ 70 ಲಕ್ಷ ರೂಪಾಯಿ ವೆಚ್ಚದ ಜಲಜೀವನ್ ಮೀಷನ್ ಕಾಮಗಾರಿ ಉದ್ಘಾಟಿಸಿ, 15 ಲಕ್ಷ ರೂಪಾಯಿ ವೆಚ್ಚದ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಸರ್ಕಾರಿ ಉರ್ದು ಶಾಲೆಯ ಮಕ್ಕಳಿಗೆ ಪೀಠೋಪಕರಣ ವಿತರಿಸಿದ ಶಾಸಕರು, ಹರಗನಹಳ್ಳಿ ಗ್ರಾಮದಲ್ಲಿ 15 ಲಕ್ಷ ರೂಪಾಯಿ ವೆಚ್ಚದ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಕೋಣನತಲೆ ಗ್ರಾಮದಲ್ಲಿ 43 ಲಕ್ಷ ರೂಪಾಯಿ ವೆಚ್ಚದ ಜಲಜೀವನ್ ಮೀಷನ್ ಕಾಮಗಾರಿ ಉದ್ಘಾಟಿಸಿದ ಶಾಸಕರು ಹೈಮಾಸ್ಕ್ ಹಾಗೂ ಶಾಲಾ ಮಕ್ಕಳಿಗೆ ಪೀಠೋಪಕರಣ ವಿತರಿಸಿದ ಶಾಸಕರು 1.73 ಕೋಟಿ ರೂಪಾಯಿ ಹೆಚ್ಚು ಅನುದಾನದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ಸಂದರ್ಭ ಉಪಾಧ್ಯಕ್ಷ ಮಂಜಪ್ಪ, ಉಪಾಧ್ಯಕ್ಷ ರವಿಕುಮಾರ್ ಗ್ರಾ.ಪಂ.ಸದಸ್ಯ ಮಂಜಪ್ಪ,ಸರೋಜಮ್ಮ ಸಿದ್ದಪ್ಪ, ಜ್ಯೋತಿ ಅಣ್ಣಪ್ಪ, ಸೇರಿದಂತೆ ಮುಖಂಡರಾದ ನರಸಿಂಹಮಪ್ಪ, ರಮೇಶ್, ಮಂಜುನಾಥ್,ಬೊಮ್ಮಣ್ಣ,ರಮೇಶಪ್ಪ, ಬಸವರಾಜಪ್ಪ, ಸುರೇಶಪ್ಪ,ಸಂತೋಷ್, ರವಿಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

Attachments area