ಜಲ್ ಜೀವನ್ ಮಿಷನ್ ಉದ್ದೇಶ ಅಂತರ್ಜಲ ಮಟ್ಟ ಹೆಚ್ಚಿಸುವುದು

ಭಾಲ್ಕಿ: ಜು.20:ತಾಲೂಕಿನ ತಾಲೂಕು ಪಂಚಾಯತ್ ಆವರಣದಲ್ಲಿ ರಿಲಯನ್ಸ್ ಫೌಂಡೇಶನ್ ಹಾಗೂ ತಾಲೂಕು ಪಂಚಾಯತ್ ಭಾಲ್ಕಿ ಸಂಯುಕ್ತ ಆಶ್ರಯದಲ್ಲಿ ಹವಾಮಾನ ಸ್ಥಿರ ಸ್ಥಾಪಕ ಕುರಿತು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
” ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಕಾಧಿಕಾರಿ ದೀಪಿಕಾ ನಾಯಕರ ನಾಯ್ಕರ್ ಹಾಗೂ ರಿಲಯನ್ಸ್ ಫೌಂಡೇಶನ್ ಜಿಲ್ಲಾ ಯೋಜನೆ ಅಧಿಕಾರಿ ರಾಮಚಂದ್ರ ಶೇರಿಕಾರ್ ಇವರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.”
” ಕಾರ್ಯಕ್ರಮದಲ್ಲಿ ಹವಾಮಾನ ಕುರಿತು , ಜಲ್ ಜೀವನ್ ಮಿಷನ್ ಯೋಜನೆ , ನೀರಿನ ಪುನರ್ ಬಳಕೆ, ಇಂಗು ಗುಂಡಿ, ಕೃಷಿ ಹೊಂಡ, ಬೂದು ನೀರು ನಿರ್ವಹಣೆ ಮಾಡಲು ಗ್ರಾಮ ಪಂಚಾಯತಿಯಲ್ಲಿ 264 ಹೆಚ್ಚು ಯೋಜನೆಗಳು ಇವೆ . ಅದರ ಲಾಭ ಪಡೆದುಕೊಳ್ಳಬೇಕು ,ಅದರೊಂದಿಗೆ 29 ಇಲಾಖೆಗಳ ಯೋಜನೆಗಳ ಕುರಿತು ಮಾಹಿತಿಯನ್ನು ನೀಡುತ್ತಿರುವ ರಿಲಯನ್ಸ್ ಫೌಂಡೇಶನ್ ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಧನ್ಯವಾದ ಹೇಳಿದರು”
” ಹವಾಮಾನ ಸ್ಥಿತಿ ಸ್ಥಾಪಕತ್ವದಲ್ಲಿ ಅರಣ್ಯ ಸಂರಕ್ಷಣೆ, ಕುಡಿಯುವ ನೀರಿನ ಸಮರ್ಪಕ ಬಳಕೆ, ತೋಟಗಾರಿಕೆಯಲ್ಲಿ ಅರಣ್ಯ ಕೃಷಿ, ಕುರಿತು ರಿಲಯನ್ಸ್ ಫೌಂಡೇಶನ್ ಯೋಜನಾಧಿಕಾರಿ ರಾಮಚಂದ್ರಶೇಖರ್ ಹೇಳಿದರು”
” ಇದೇ ಸಂದರ್ಭದಲ್ಲಿ ಸೂರ್ಯಕಾಂತ್ ( ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರು), ಬಾಲಾಜಿ ಕೋಟೆ (ಮನರೇಗಾ ಸಹಾಯಕ ನಿರ್ದೇಶಕರು), ಸಂಗಪ್ಪ ಅತಿವಾಳ ( ಜಿಲ್ಲಾ ಮ್ಯಾನೇಜರ್), ರಾಜೇಂದ್ರ ಮಾಳಿ ( ಸಂಪನ್ಮೂಲ ವ್ಯಕ್ತಿ) , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸೇರಿ ಹಲವರು ಹಾಜರಿದ್ದರು.
” ಗುರುಪ್ರಸಾದ್ ಮೆಂಟೇ ನಿರೂಪಿಸಿದರು. ಸಂಗಪ್ಪ ಅತಿವಾಳ ವಂದಿಸಿದರು.