ಜಲ್ಲಿ ವಾಹನಗಳ ಹಾವಳಿ ಕ್ರಮಕ್ಕೆ ಆಗ್ರಹ

ಕೊಲ್ಹಾರ:ಮಾ.14: ಪಟ್ಟಣದಲ್ಲಿ ಜಲ್ಲಿ ಕ್ರಷರ್ ವಾಹನಗಳು ಸುರಕ್ಷತಾ ಕ್ರಮ ಇಲ್ಲದೆ ಸಂಚಾರ ಮಾಡುತ್ತಿದ್ದು ಇದರಿಂದ ರಸ್ತೆಯ ಮೇಲೆ ಕಡಿ ಬೀಳುವ ಕಾರಣ ಅನೇಕ ತೊಂದರೆಗಳು ಉಂಟಾಗುತ್ತಿದ್ದು ಹಾಗೂ ಬೈಕ್ ಸವಾರರು ಪದೇ ಪದೇ ಅಪಘಾತಕ್ಕೆ ಈಡಾಗುತ್ತಿದ್ದಾರೆ ಅಧಿಕಾರಿಗಳು ಕಡಿ ತುಂಬಿಕೊಂಡು ಹೋಗುವ ವಾಹನಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆ.ಆರ್.ಎಸ್ ಪಕ್ಷದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಪ ಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಕೆ.ಆರ್.ಎಸ್ ಪಕ್ಷದ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ, ಉಪ್ಪಲದಿನ್ನಿ ಕ್ರಾಸ್ ಹಾಗೂ ಪಟ್ಟಣದಲ್ಲಿ ಕಡಿ ತುಂಬಿಕೊಂಡು ಸಂಚಾರ ಮಾಡುವ ವಾಹನಗಳು ರಸ್ತೆಯ ಮೇಲೆ ಬೇಕಾಬಿಟ್ಟಿಯಾಗಿ ಕಡಿ ಚಲ್ಲಿಕೊಂಡು ಹೋಗುತ್ತಿವೆ ಬೈಕ್ ಸವಾರರ ಸಹಿತ ಅನೇಕರು ಇದರಿಂದ ಅಪಘಾತಕ್ಕೆ ಈಡಾಗಿ ತೊಂದರೆ ಅನುಭವಿಸುತ್ತಿದ್ದಾರೆ ಕೂಡಲೇ ಅಧಿಕಾರಿಗಳು ಇವುಗಳಿಗೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಡಿವಾಣ ಹಾಕದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.