ಜಲಿಯನ್ ವಾಲಾಬಾಗ್ ಘಟನೆಯಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ರಾಂತಿಕಾರಕ ಬದಲಾವಣೆ

ಕಲಬುರಗಿ:ಎ.13: ಜಲಿಯನ್ ವಾಲಾಬಾಗ್ ಘಟನೆ ಸ್ವಾತಂತ್ರ್ಯ ಆಂದೋಲನದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಗೆ ಸಾಕ್ಷಿಯಾಯಿತು. ಭಾರತೀಯರಲ್ಲಿ ಸುಪ್ತವಾಗಿದ್ದ ಸ್ವಾತಂತ್ರ್ಯದ ಬಯಕೆಯನ್ನು ಮತ್ತಷ್ಟು ಪ್ರಖರಗೊಳಿಸುವಂತಾಯಿತು. ಈ ಘಟನೆ ಪ್ರತಿಯೊಬ್ಬ ಭಾರತೀಯ ಖಂಡಿಸುತ್ತಾನೆ. ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರು ಈ ಘಟನೆ ಇತಿಹಾಸದ ಪುಟದಲ್ಲಿ ಒಂದು ನಾಚಿಕೆಗೇಡು ಸಂಗತಿಯಾಗಿದೆ. ಇದರ ಬಗ್ಗೆ ವಿಷಾದಿಸುತ್ತೇನೆಂದು ಅಲ್ಲಿನ ಸಂಸತ್ತನಲ್ಲಿ ಹೇಳಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ದೇವಿ ನಗರದ ಬಿರಾದಾರ ಕಾಂಪೆಕ್ಸ್‍ನಲ್ಲಿರುವ ‘ವಿದ್ಯಾಸಿರಿ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ಜಲಿಯನ್ ವಾಲಾಬಾಗ್ ಘಟನೆ : ಒಂದು ಅವಲೋಕನ’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪಂಜಾಬ್‍ನ ಅಮೃತಸರದ ಜಲಿಯನ್ ವಾಲಾಬಾಗ್‍ನಲ್ಲಿ ಏಪ್ರಿಲ್ 13,1919ರಂದು ಈ ಘಟನೆ ಜರುಗಿತು. ದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಚರ್ಚಿಸಲು ಸಾವಿರಾರು ಹೋರಾಟಗಾರರು, ದೇಶಪ್ರೇಮಿಗಳು ಅಲ್ಲಿ ಸೇರಿದ್ದರು. ಬ್ರಿಟಿಷ ಅಧಿಕಾರಿ ಡಯರ್‍ನು ಅವರೆಲ್ಲರÀ ಮೇಲೆ ಗುಂಡಿನ ದಾಳಿ ಮಾಡಲು ಆದೇಶಿದ್ದರಿಂದ 379 ಜನರು ಸಾವನಪ್ಪಿ, ಸುಮಾರು 1500 ಜನರು ಗಾಯಗೊಂಡರು. ಈ ಘಟನೆ ಭಾರತೀಯರ ಮೇಲೆ ತೀರ್ವ ಪ್ರಭಾವ ಬೀರುವ ಮೂಲಕ ಎಲ್ಲರಲ್ಲಿಯೂ ಸ್ವಾತಂತ್ರ್ಯದ ಕಿಚ್ಚು ಮತ್ತಷ್ಟು ಹೆಚ್ಚಾಗುವಂತೆ ಪ್ರಚೋದನೆ ನೀಡಿತು. ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಸ್ಮರಣೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ಸತೀಶ್ ಹತ್ತಿ, ರೇವಣಸಿದ್ದಪ್ಪ ಪವಾಡಶೆಟ್ಟಿ ಸೇರಿದಂತೆ ಇನ್ನಿತರರಿದ್ದರು.