ಜಲಾಶಯಕ್ಕೆ ಬಾಗಿನ

(ಸಂಜೆವಾಣಿ ವಾರ್ತೆ)
ಮುಂಡಗೋಡ,ಆ3 : ತಾಲೂಕಿನ ಮಳಗಿ ಧರ್ಮಾ ಜಲಾಶಯಕ್ಕೆ ಶಾಸಕ ಶಿವರಾಮ ಹೆಬ್ಬಾರ ಬಾಗಿನ ಅರ್ಪಿಸಿದರು.
ಬಾಗಿನ ಅರ್ಪಿಸಿ ಮಾತನಾಡಿದ ಶಾಸಕ ಹೆಬ್ಬಾರ, ತಾಲೂಕಿನ ಜೀವನಾಡಿ ಮಾತ್ರವಲ್ಲದೇ ಹಾನಗಲ್ ಮತ್ತು ಹಾವೇರಿ ರೈತರ ಬದುಕಿಗೆ ಶಕ್ತಿ ನೀಡುವಂತಹ ಧರ್ಮಾ ಜಲಾಶಯ ಬರ್ತಿಯಾಗಿ ಕೋಡಿ ಹರಿಯುತ್ತಿರುವುದು ಮುಂಡಗೋಡ ತಾಲೂಕಿಗಿಂತ ಹೆಚ್ಚು ಹಾವೇರಿ ಜಿಲ್ಲೆಯ ರೈತರಿಗೆ ಹರ್ಷ ತರುವಂತಹದ್ದು, ಹಾವೇರಿ ರೈತರಿಗೆ ಇನ್ನು ಉತ್ತಮ ಬೆಳೆ ಬೆಳೆಯಲು ಅನುಕೂಲವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಉಪಾಧ್ಯಕ್ಷ ಎಲ್.ಟಿ ಪಾಟೀಲ, ಮಳಗಿ ಗ್ರಾ.ಪಂ ಅಧ್ಯಕ್ಷ ರಾಘವೇಂದ್ರ ಪಾಟೀಲ, ರೇಖಾ ಅಂಡಗಿ, ಪ್ರಮೋದ ಡವಳೆ, ಮಹೇಶ ಹೊಸಕೊಪ್ಪ, ವಿನಯ್ ಪಾಟೀಲ, ಗುಡ್ಡಪ್ಪ ಕಾತೂರ, ರಾಜು ಗುಬ್ಬಕ್ಕನವರ, ತುಕಾರಾಮ ಇಂಗಳೆ, ಚಂದ್ರಗೌಡ ಶಿವನಗೌಡ್ರ ಮುಂತಾದವರು ಉಪಸ್ಥಿತರಿದ್ದರು.