ಜಲಸಂರಕ್ಷಣೆ ಮಾಡದಿದ್ದರೇ 3ನೇ ವಿಶ್ವಯುದ್ದ; ಸಿದ್ದಲಿಂಗ ದೇವರು

ವಾಡಿ:ಮಾ.23: ಜಲ ಸಂರಕ್ಷಣೆ ಹಾಗೂ ನೀರಿನ ಉಳಿತಾಯ ಮಾಡದಿದ್ದರೆ ಮುಂದೊಂದು ದಿನ ನೀರಿಗಾಗಿ ಹಾಹಾಕಾರ ನಡೆದು ಮೂರನೆ ವಿಶ್ವಯುದ್ದವೇ ನಡೆದು ಹೋಗಬಹುದು ಎಂದು ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ಧಲಿಂಗ ದೇವರು ನುಡಿದರು.

ಚಿತ್ತಾಪೂರ ತಾಲ್ಲೂಕಿನ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಜಲ ದಿನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉಧ್ಘಾಟಿಸಿ ಮಾತನಾಡುತ್ತಾ, ನೀರು ಒಂದು ಅತ್ಯಮುಲ್ಯ ನೈಸರ್ಗಿಕ ಸಂಪನ್ಮೂಲ. ಇಂತಹ ಸಂಪನ್ಮೂಲವನ್ನು ಮನುಷ್ಯ ತನ್ನ ಅತಿಯಾದ ವ್ಯಾಮೋಹದಿಂದ ಅದನ್ನು ಮಲೀನ ಮಾಡಿ ಇಂದು ಶುದ್ಧ ನೀರನ್ನು ದುಡ್ಡು ಕೊಟ್ಟು ಕೊಂಡುಕೊಳ್ಳುವಂತೆ ಮಾಡಿದ್ದಾನೆ. ಪ್ರಕೃತಿಯ ಮೇಲಿನ ದಬ್ಬಾಳಿಕೆಯಿಂದ ಇಂದು ನಾವು ಹನಿ ನೀರಿಗೂ ಪರಿತಪಿಸುವಂತಾಗಿದೆ. ಇದಕ್ಕೆಲ್ಲಾ ಪಶು ಪಕ್ಷಿಗಳು, ಪ್ರಾಣಿಗಳು ಕಾರಣರಲ್ಲ ಇದಕ್ಕೆ ನಾವೇಲ್ಲರೂ ಜವಾಬ್ದಾರರು ಎಂದು ರಾವೂರ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ಧಲಿಂಗ ದೇವರು ಹೇಳಿದರು.

ವಿಜ್ಞಾನ ಶಿಕ್ಷಕಿ ಸುಗುಣಾ ಕೋಳ್ಕೂರ ಉಪನ್ಯಾಸ ನೀಡಿದರು. ವೇದಿಕೆ ಮೇಲೆ ಶಿಕ್ಷಕರಾದ ಸಿದ್ದಲಿಂಗ ಬಾಳಿ, ಶಿವಕುಮಾರ ಸರಡಗಿ, ಮಂಜುಳಾ ಪಾಟೀಲ ಇದ್ದರು. ನಾಗವೇಣಿ ಪರಿಸರ ಗೀತೆ ಹಾಡಿದಳು. ವಿಧ್ಯಾರ್ಥಿ ಕೃಷ್ಣ ನಿರೂಪಿಸಿ ವಂದಿಸಿದನು. ಪಕ್ಷಿಗಳಿಗೆ ನೀರುಣಿಸಲು ವಿದ್ಯಾರ್ಥಿಗಳು ತಯ್ಯಾರಿಸಿದ್ದ ಹರಿಣಗಳನ್ನು ಗಿಡಗಳಿಗೆ ಪೂಜ್ಯರು ಕಟ್ಟಿ ನೀರುಣಿಸುವ ಮೂಲಕ ಚಾಲನೆ ನೀಡಿದರು.