ಜಲಸಂಗ್ರಹಗಾರಕ್ಕೆ ಲಿಂಬಾವಳಿ ಚಾಲನೆ

ಮಹದೇವಪುರಜ,೮-ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ೫ ನೇ ಹಂತದ ಕಾವೇರಿ ನೀರು ಸರಬರಾಜು ಯೋಜನೆಯಡಿ ಮಹದೇವಪುರದ ಹಾಡೋ ಸಿದ್ದಾಪುರದ ಬಳಿ ೪೦ ಎಂ ಎಲ್ ಸಾರ್ಮಥ್ಯದ ನೆಲಮಟ್ಟದ ಜಲಸಂಗ್ರಹಣಾಗಾರ ನಿರ್ಮಾಣ ಕಾಮಗಾರಿಗೆ ಶಾಸಕ ಅರವಿಂದ ಲಿಂಬಾವಳಿ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ನಗರದ ಹೊರ ವಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು . ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಯೋಜನೆಗಳನ್ನು ರೂಪಿಸಿದ್ದು ಹಂತಹಂತವಾಗಿ ತಲುಪಿಸಲಾಗುವುದೆಂದು ತಿಳಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮನೋಹರರೆಡ್ಡಿ ಮಾಜಿ ಪಾಲಿಕೆ ಸದಸ್ಯರಾದ ಆಶಾ ಸುರೇಶ್, ಮುಖಂಡರಾದ ರಾಜರ ರಾಜೇಶ್ , ಭೀಮಣ ಇತರರು ಇದ್ದರು.