ಜಲಮೂಲಗಳನ್ನು ರಕ್ಷಿಸದಿದ್ದರೆ ನಾಶ

ಕೋಲಾರ,ಮಾ.೨೩: ವಿಶ್ವ ಜಲ ದಿನಾಚರಣೆ ಅಂಗವಾಗಿ ದೇಶಿಹಳ್ಳಿ ಕೆರೆಯಲ್ಲಿ ಗಿಡ ನೆಡುವ ಮುಖಾಂತರ ಆಚರಣೆ ಮಾಡಿ, ಜಲಮೂಲಗಳನ್ನು ರಕ್ಷಣೆ ಮಾಡದೇ ಹೋದರೆ ವಿಶ್ವವೇ ನಾಶವಾಗುವ ಕಾಲಸನ್ನಿಹಿತವಾಗುತ್ತದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯನ ದುರಾಸೆಗೆ ಒಳಗಾಗಿ ದಿನೇ ದಿನೇ ಪ್ರಕೃತಿ ಮೇಲೆ ದಬ್ಬಾಳಿಕೆ ಹೆಚ್ಚಾದಂತೆ ಪ್ರಕೃತಿಯು ಮನುಷ್ಯನ ಮೇಲೆ ತನ್ನ ವಿಶ್ವರೂಪವನ್ನು ತೋರಿಸುತ್ತದೆ ಎಂದರಯ. ಉದಾಹರಣೆಗೆ ಕಣ್ಣಿಗೆ ಕಾಣದ ವೈರಸ್ ಹಾವಳಿಯಿಂದ ವಿಶ್ವವೇ ಅಲ್ಲೋಲ-ಕಲ್ಲೋವಾಗಿರುವುದಕ್ಕೆ ಸಾಕ್ಷಿಯಾಗಿದೆ. ಮತ್ತೊಂದೆಡೆ ಕೈಗಾರಿಕೆಗಳು ಮತ್ತಿತ್ತರ ತ್ಯಾಜ್ಯ ವಸ್ತುಗಳಿಂದ ಜಲಮೂಲಗಳು ದಿನೇ ದಿನೇ ಕಲುಷಿತವಾಗುವ ಜೊತೆಗೆ ಶುದ್ಧ ಕುಡಿಯುವ ನೀರು ಸಿಗದೇ ಸಕಲ ಜೀವರಾಶಿಗಳು ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ತಿಳಿಸಿದರು. ಜೊತೆಗೆ ಜಲಮೂಲಗಳನ್ನು ರಕ್ಷಣೆ ಮಾಡಬೇಕಾದ
ಅಧಿಕಾರಿಗಳು ನಾಪತ್ತೆಯಾಗಿರುವುದಕ್ಕೆ ಅಸಮಾದಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಸಂಚಾಲಕ ಅನಿಲ್, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಚಲಪತಿ, ಮುಂತಾದವರಿದ್ದರು.