ಜಲಮಂಡಳಿ ಹಗರಣ:ವಿಚಾರಣೆಗೆ ಕೇಜ್ರಿ ಚಕ್ಕರ್

ನವದೆಹಲಿ, ಮಾ. ೧೮- ಈಗಾಗಲೇ ದೆಹಲಿ ಮದ್ಯನೀತಿ ಹಗರಣದಲ್ಲಿ ಧರಣಿ ಸಮನ್ಸ್ ಜಾರಿಗೆ ಸಿಲುಕಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಜಲಮಂಡಳಿ ಅಕ್ರಮ ಹಣ ಹಗರಣದಲ್ಲಿ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ಗೆ ಕೇಜ್ರಿವಾಲ್ ಗೈರು ಹಾಜರಾಗಿದ್ದಾರೆ.
ಇಡಿ ಅಧಿಕಾರಿಗಳು ಜಾರಿಗೊಳಿಸಿರುವ ಸಮನ್ಸ್ ಕಾನೂನುಬಾಹಿರ ಎಂದು ಆರೋಪಿಸಿರುವ ಆಮ್ ಆದ್ಮಿ ಪಾರ್ಟಿ ಕೇಂದ್ರದ ತನಿಖಾ ಸಂಸ್ಥೆಗಳು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ಸಮನ್ಸ್ ಜಾರಿ ಮಾಡಲಾಗಿದೆ ಎಂದು ಆರೋಪಿಸಿದೆ.
ದೆಹಲಿ ಜಲಮಂಡಳಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರುವ ಬಗ್ಗೆ ಕೇಜ್ರಿವಾಲ್ ಅವರಿಗೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿ ಇಂದು ವಿಚಾರಣೆಗೆ ಹಾಜರಾಗುವಂತೆ ನಿನ್ನೆ ನೋಟೀಸ್ ಜಾರಿ ಮಾಡಿತ್ತು. ಇದು ಕೇಜ್ರಿವಾಲ್ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣ ಇದಾಗಿದೆ.
ದೆಹಲಿ ಅಬಕಾರಿ ಹಗರಣ ಕುರಿತಂತೆ ಕೇಜ್ರಿವಾಲ್ ಗೆ ಇದುವರೆಗೆ ೮ ಬಾರಿ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಲಾಗಿದೆ. ಆದರೆ ಇದುವರೆಗೆ ದೆಹಲಿ ಮುಖ್ಯಮಂತ್ರಿ ವಿಚಾರಣೆ ಹಾಜರಾಗದೆ ಕಾನೂನುಬಾಹಿರ ಎಂದು ಆರೋಪಿಸಿದ್ದಾರೆ.
ಕೇಜ್ರಿವಾಲ್ ಗೆ ೯ನೇ ಬಾರಿಯೂ ಸಮನ್ಸ್ ಜಾರಿ ಮಾಡಿದ್ದು, ೨೧ ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.