ಜಲಧಾರೆ ಯೋಜನೆ ಪೂರ್ಣಕ್ಕೆ ದದ್ದಲ್ ಒತ್ತಾಯ

ರಾಯಚೂರು,ಫೆ.೨೨- ಜಲಧಾರೆ ಯೋಜನೆಯ ಮೂಲಕ ಬಹುಗ್ರಾಮಗಳ ಕುಡಿಯುವ ನೀರಿನ ಕಾಮಗಾರಿ ತ್ವರಿತವಾಗಿ ಮುಕ್ತಾಯಗೊಳ್ಳಿಸಬೇಕೆಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ.ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಶಾಸಕರು ಜಲಧಾರೆ ಯೋಜನೆಯ ಮೂಲಕ ಬಹುಗ್ರಾಮಗಳ ಕುಡಿಯುವ ನೀರಿನ ಕಾಮಗಾರಿ ಕುರಿತು ಸರ್ಕಾರ ಗಮನಕ್ಕೆ ತಂದು ಮಾತನಾಡಿದ ಶಾಸಕರು
ರಾಯಚೂರು ಜಿಲ್ಲೆಯ ತಾಲೂಕು ಹಳ್ಳಿಗಳಬಗ್ಗೆ ಮಾಹಿತಿಯನ್ನು ಕೇಳಿ, ಸ್ವಲ್ಪ ಮಾಹಿತಿಯಲ್ಲಿ ವ್ಯತ್ಯಾಸವಾಗಿದೆ ಅದನ್ನು ಸರಿಪಡಿಸಿಕೊಡಬೇಕು ಎಂದು ಮನವಿ ಮಾಡಿಜಲಧಾರೆ ಯೋಜನೆಯನ್ನು ಆದಷ್ಟು ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳ್ಳಿಸಬೇಕು.
ಬೇಸಿಗೆ ಆರಂಭವಾಗುತ್ತಿದೆರಾಯಚೂರು ಜಿಲ್ಲೆ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ನೀರಿನ ಅಭಾವ ತಪ್ಪಿಸುವ ಉದ್ದೇಶದಿಂದ ಜಲಧಾರೆ ಯೋಜನೆ ಮೂಲಕ ಮನೆ ಮನೆಗೆ ವೈಯಕ್ತಿಕ ನಳದ ವ್ಯವಸ್ಥೆ ಕಲ್ಪಿಸು ಕೆಲಸ ತುಂಬ ನಿಧಾನವಾಗಿ ಸಾಗುತ್ತದೆ.
ಹೀಗಾಗಿ ಕಾಮಗಾರಿ ಪ್ರಾರಂಭವಾಗಿ ೯ ತಿಂಗಳು ಕಳೆದಿದೆ, ಇನ್ನೂ ಕೆಲಸ ಮುಕ್ತಾಯವಾಗಿಲ್ಲ ನಿಧಾನವಾಗುತ್ತದೆ. ಈಗಾಗಲೇ ಜೆಜೆಎಂ ಯೋಜನೆಯಡಿಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಪೈಪ್ ಲೈನ್ ವ್ಯವಸ್ಥೆ ಹಾಕಲಾಗಿದೆ.
ಅದಕ್ಕೆ ಬೇಕಾದ ಅನುಕೂಲ ಇಲ್ಲ ಕ್ಷೇತ್ರದಲ್ಲಿ ಎರಡು ನದಿಗಳು ಹರಿಯುತ್ತಿದೆ ಬೇಸಿಗೆಯಲ್ಲಿ ನದಿಯಲ್ಲಿ ಕೂಡ ಖಾಲಿಯಾಗುತ್ತದೆ ನೀರಿನ ಅಭಾವ ನಿರ್ಮಾಣವಾಗುತ್ತದೆ. ಪ್ರತಿ ವರ್ಷ ಟಾಸ್ಕ್ ಫೋರ್ಸ್ ಸಮಿತಿಯೂ ಅನುದಾನ ನೀಡುತ್ತಿತ್ತು, ೨ ವರ್ಷದಿಂದ ಅನುದಾನ ನೀಡುತ್ತಿಲ್ಲ, ಬೋರ್ವೆಲ್ ಕೊರಿಯಬೇಕು ಎಂದರೆ ಅನುದಾನ ನೀಡುತ್ತಿಲ್ಲ. ಜಲಧಾರೆ ಯೋಜನೆ ಬರಬೇಕಾದ ಇನ್ನೂ ೨೦ ತಿಂಗಳ ಕಾಯಬೇಕಾಗುತ್ತದೆ. ನನ್ನ ಕ್ಷೇತ್ರದಲ್ಲಿ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಮತ್ತು ಪಾಸ್ಪೋರ್ಟ್ ಸಮಿತಿಗೆ ಪ್ರತಿ ವರ್ಷದಂತೆ ನೀಡುತ್ತಿದ್ದ ಅನುದಾನವು ಸಹ ಜಾರಿ ಮಾಡಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲಧಾರೆ ಯೋಜನೆ ಮೂಲಕ ರಾಯಚೂರು ಜಿಲ್ಲೆಗೆ ನಾರಾಯಣಪುರ ಜಲಾಶಯದಿಂದ ಕುಡಿಯುವ ನೀರು ಒದಗಿಸುವ ಯೋಜನೆಗೆ ಅನುಮತಿ ನೀಡಲಾಯಿತು, ತಮ್ಮ ಸರ್ಕಾರ ಕೂಡ ಅನುದಾನ ಹೆಚ್ಚಿಸಿದೆ, ಸ್ವಾಗತಾರ್ಹ, ಆದರೆ
ಆ ಕಾಮಗಾರಿಯನ್ನು ಅತೀ ಶೀಘ್ರದಲ್ಲಿ ಮುಕ್ತಾಯಗೊಳ್ಳಿಸಬೇಕು, ಅಲ್ಲದೆ ಎಲ್ಲಿ ನೀರಿನ ಅಭಾವ ಇರುತ್ತದೇಯೋ ಅಲ್ಲಿ ಬೋರ್ ವೆಲ್ ಕೊರೆಸಿ ಕೊಡಬೇಕು.ಪ್ರತಿವರ್ಷ ನೀಡಬೇಕಾದ ಅನುದಾನ ತುರ್ತಾಗಿ ನೀಡಬೇಕು, ನನ್ನ ಜಿಲ್ಲೆ ಮತ್ತು ಕ್ಷೇತ್ರದಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಬೇಕು ಎಂದು ಸರ್ಕಾರ ಗಮನಕ್ಕೆ ತಂದರು.