ಜಲಜೀವನ ಮಿಷನ್ ಅಡಿಯಲ್ಲಿ ಗ್ರಾಮದ ಸಹಭಾಗಿತ್ವದಲ್ಲಿ ಮನೆ-ಮನೆಗೆ ನಳ ನೀರು ಸಂಪರ್ಕ

ಕಲಬುರಗಿ,ನ.14-ಜಿಲ್ಲೆಯ ಶಹಬಾದ ತಾಲೂಕಿನ ಭಂಕೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ “ತರಿ ತಾಂಡ” ದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕುರಿತು ಗ್ರಾಮ ಸಭೆ, ಮತ್ತು ಸಮುದಾಯದಲ್ಲಿ ಜನರ ಸಹಭಾಗಿತ್ವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಕಲಬುರಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಲಬುರಗಿ ವಿಭಾಗ ಹಾಗೂ “ಖಗಂ” ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಡಾ.ರಾಜು ಕಂಬಾಳಿಮಠ ಅವರು ಭಾಗವಹಿಸಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಗ್ರಾಮಸ್ಥರಿಗೆ ಶುದ್ದ, ಸುರಕ್ಷಿತ ಕುಡಿಯುವ ನೀರನ್ನು ಕಾರ್ಯಾತ್ಮಕ ಮನೆ ನಳ ಸಂಪರ್ಕ ಒದಗಿಸುವ ಕಾರ್ಯಕ್ರಮವಿದ್ದು, ಇದು ಮುಖ್ಯವಾಗಿ ಜನರ ಸಹಭಾಗಿತ್ವದಿಂದ ಜರುಗುವ ಕಾರ್ಯಕ್ರಮವಾಗಿದೆ ಎಂದರು. ಇದರಲ್ಲಿ ಗ್ರಾಮಸ್ಥರು ಯೋಜನೆಯ ಮಾಲಿಕತ್ವ ಹೊಂದುವ ನಿಟ್ಟಿನಲ್ಲಿ ಸರಕಾರ ಶೇ. 75 ಅನುದಾನ ನೀಡುತ್ತಿದ್ದು, ಇನ್ನುಳಿದಂತೆ ಶೇಕಡಾ 15% ಗ್ರಾಮ ಪಂಚಾಯತಿ ವಂತಿಕೆ ಹಾಗೂ ಸಮುದಾಯ ವಂತಿಕೆ ಶೇ.10% ಇರುತ್ತದೆ ಎಂದರು , ಇದರೊಂದಿಗೆ ವಿಶೇಷವಾಗಿ ಜನ ಜಾಗೃತಿ ಮೂಡಿಸಲು ಮೊದಲಿಗೆ ಆಂದೋಲನ ರೂಪದಲ್ಲಿ 100 ದಿನಗಳ ಒಳಗಾಗಿ ಶಾಲೆ, ಅಂಗನವಾಡಿ ,ಆಶ್ರಮ ಶಾಲೆಗಳಿಗೆ ಕುಡಿಯುವ ಕೊಳವೆ ನೀರು ನಳ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಗುರಿತಲುಪಯಲಾಗುತ್ತದೆ ಎಂದರು . ಕಾರ್ಯಕ್ರಮದಲ್ಲಿ ಭಂಕೂರು ಗ್ರಾ.ಪಂ.ಪಿಡಿಓ ವೇದಾಂಗ ತುಪ್ಪ, ರುಡಾ ಅನುಷ್ಠಾನ ಸಂಸ್ಥೆಯ ತಂಡದ ನಾಯಕರಾದ ಸಂತೋಷ್ ಮುಲಗೆ, ಸಿಬ್ಬಂದಿಗಳಾದ ರಾಜಕುಮಾರ್ ಮಡಿವಾಳ, ಶ್ರವಣಕುಮಾರ ಅಕ್ಕಿಮನಿ ಮತ್ತು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಹಾಗೂ ಊರಿನ ಗ್ರಾಮಸ್ಥರು,ಮುಖಂಡರು ಪಾಲ್ಗೊಂಡಿದ್ದರು.