ಜಲಜೀವನ ಮಿಶನ್ ಯೋಜನೆಯಡಿ ಕಾಮಗಾರಿಗೆ ಚಾಲನೆ

ರಾಮದುರ್ಗ,ಮಾ15: ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಅನುದಾನದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ರಾಜಕೀಯ ಮಾಡದೇ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಜನರಿಗೆ ಶುದ್ಧ ಕುಡಿಯುವ ನೀರು ನೀಡುವ ಜೊತೆಗೆ ನೀರಿನ ಮಿತ ಬಳಕೆಗೆ ಆದ್ಯತೆ ನೀಡುವ ಉದ್ಧೇಶದಿಂದ ಕೇಂದ್ರ ಸರ್ಕಾರ ಜಲಜೀವನ ಮಿಶನ್ ಯೋಜನೆ ಮೂಲಕ ಪ್ರತಿ ಮನೆಗೆ ನಳಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಮುದೇನೂರಲ್ಲಿ ಜಲಜೀವನ ಮಿಶನ್ ಯೋಜನೆಯಡಿ ರೂ. 1.40 ಕೋಟಿ ವೆಚ್ಚದಲ್ಲಿ 630 ಮನೆಗಳಿಗೆ ನಳ ಜೋಡನೆ, ರೂ. 20 ಲಕ್ಷ ವೆಚ್ಚದಲ್ಲಿ ಮುದೇನೂರ-ಮುದಕವಿ ರಸ್ತೆ ಅಭಿವೃದ್ಧಿ, ರೂ. 68 ಲಕ್ಷ ವೆಚ್ಚದಲ್ಲಿ ಚೆನ್ನಾಪೂರ ಡಿಎಲ್ ಟಿಯ 451 ಮನೆ ನಳ ಜೋಡಣೆ, ರೂ. 37.50 ಲಕ್ಷ ವೆಚ್ಚದಲ್ಲಿ ಚೆನ್ನಾಪೂರದ 220 ಮನೆಗಳಿಗೆ ನಳ ಜೋಡಣೆ, ಪ್ರಧಾನಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ರೂ. 40 ಲಕ್ಷ ವೆಚ್ಚದಲ್ಲಿ ಚೆನ್ನಾಪೂರದ ಸಿಸಿ ರಸ್ತೆ, ಚರಂಡಿ ಹಾಗೂ ಅಂಗನವಾಡಿ ಕಾಮಗಾರಿಗೆ ,ರೂ. 15.15 ಲಕ್ಷ ವೆಚ್ಚದಲ್ಲಿ ಆನೆಗುದ್ದಿಯ ಹಣಮಾಪೂರÀ ಚೆನ್ನಾಪೂರ ರಸ್ತೆ ಸುಧಾರಣೆ, ಹಾಗೂ ರೂ. 62 ಲಕ್ಷ ವೆಚ್ಚದಲ್ಲಿ ಎಮ್ ತಿಮ್ಮಾಪೂರದ 195 ಮನೆಗಳ ನಳ ಜೋಡಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕಾಮಗಾರಿ ನಡೆದ ಸಂದರ್ಭದಲ್ಲಿ ಸಣ್ಣ ಪುಟ್ಟ ವಿಷಯಕ್ಕೆ ಗ್ರಾಮಸ್ಥರು ತಕರಾರು ಮಾಡದೆ ಕಳಪೆಯಾದರೆ ಅಧಿಕಾರಿಗಳ ಗಮನಕ್ಕೆ ತರಬೇಕು ವಿನಃ ಕಾಮಗಾರಿಗೆ ತಡೆಯೊಡ್ಡಬಾರದು ಎಂದು ಹೇಳಿ, ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿ ಅಭಿವೃದ್ದಿ ಕಾಮಗಾರಿಯನ್ನು ಪೂರ್ಣಗೊಳಿಸÀಬೇಕೆಂದÀರು.
ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಕಳಪೆಯಾದರೆ ಅಧಿಕಾರಿಗಳನ್ನೆ ಹೊಣೆ ಮಾಡಲಾಗುವುದು ಮತ್ತು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಿಕಾರ್ಡ ಬ್ಯಾಂಕ ಅಧ್ಯಕ್ಷ ಜಾನಪ್ಪ ಹಕಾಟಿ, ಮುದೇನೂರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸಲಿಂಗಪ್ಪ ಹರಗುಟಗಿ, ಸದಸ್ಯ ವಿರುಪಾಕ್ಷೀ ಕಾಯಿ, ಮುದಕವಿ ಗ್ರಾಪಂ ಅಧ್ಯಕ್ಷೆ ಶಾಂತವ್ವಾ ಜಾಲಾಪೂರ ಉಪಾಧ್ಯಕ್ಷ ಬಸಪ್ಪ ಮುದಕಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಿವಾಸ ವಿಶ್ವಕರ್ಮ, ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಿ. ಈ. ಕೊಳ್ಳಿ, ಸಹಾಯಕ ಅಭಿಯಂತರರಾದ ಮಹಾಂತೇಶ ಚೌಗಲಾ. ಪತ್ತಾರ ಹಾಗೂ ಗ್ರಾಮಸ್ಥರು ಹಾಜರಿದ್ದರು.