ಜಲಜೀವನ್ ಕಾಮಗಾರಿ ಬಗ್ಗೆ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ:- ವಿಜಯನಗರ (ಜಿಲ್ಲೆ) :-ಮಳೆಯಾಶ್ರಿತ ಬರಪೀಡಿತ ಹರಪನಹಳ್ಳಿ ಗ್ರಾಮೀಣ ಪ್ರದೇಶವಾಗಿದ್ದು ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲದೆ ಜನರು ಪರಿತಪಿಸುತ್ತಿದ್ದಾರೆ.
ಪಟ್ಟಣದ ನೀರು ಸರಬರಾಜು ಇಲಾಖೆಗೆ ಹರಪನಹಳ್ಳಿ ಕಿಸಾನ್ ಸಬಾ ಮಂಡಳಿ ವತಿಯಿಂದ ಮುತ್ತಿಗೆ ಹಾಕಿ ಜಲಜೀವನ್ ಕಾಮಗಾರಿ ಬಗ್ಗೆ ಪ್ರತಿಭಟನೆ ಮಾಡಿದರು”ಕಣ್ಣಿಲ್ಲದೆ ಕುರುಡನಿಗೆ ಕಣ್ಣು ಬಂದ ಹಾಗೆ” ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯುಕ್ತಾಶ್ರಯದಲ್ಲಿ ಜಲ ಜೀವನ್ ಮಿಷನ್ ಮನೆ ಮನೆಗೆ ಗಂಗೆ ಯೋಜನೆಯಡಿಯಲ್ಲಿ ತಾಲ್ಲೂಕಿನಲ್ಲಿ 227 ಹಳ್ಳಿಗಳಿದ್ದು, ರೂ.12,238 ಲಕ್ಷಗಳು ಹಣ ಮಂಜೂರಾಗಿರುತ್ತದೆ.
1ನೇ ಹಂತದಲ್ಲಿ 21 ಹಳ್ಳಿಗಳಲ್ಲಿ ಕಾಮಗಾರಿ ಮುಗಿದು ಹಳ್ಳಿಗೆ ನೀರು ನೀಡಿದ್ದೇವೆ ಎಂದು ಲೆಕ್ಕದಲ್ಲಿ ಮಾತ್ರ ತೋರಿಸಿ 21 ಹಳ್ಳಿಗಳಿಗೆ ನೀರು ಸಹ ಬಿಡದೆ ಕಳಪೆ ಮಟ್ಟದ ಕಾಮಗಾರಿ ಮಾಡಿ, ಹಣವನ್ನು ಲೂಟಿ ಹೊಡೆದಿದ್ದಾರೆ. ಇನ್ನುಳಿದ 208 ಹಳ್ಳಿಗಳಲ್ಲಿ 2ನೇ ಹಂತ ಮತ್ತು 3ನೇ ಹಂತದ ಕಾಮಗಾರಿಯನ್ನು ಸಂವಿಧಾನ 73ನೇ ತಿದ್ದುಪಡಿಯನ್ವಯ ಜಾರಿಗೆ ಬಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ಮತ್ತು 3೦ನೇ ವರ್ಷಾಚರಣೆ ಅಂಗವಾಗಿ ವಿಕೇಂದ್ರಣ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರವು ವೈಜ್ಞಾನಿಕವಾಗಿ ರೂಪಿಸುವುದರ ಮೂಲಕ 73ನೇ ತಿದ್ದುಪಡಿಯ ಗ್ರಾಮ ಪಂಚಾಯ್ತಿಗಳಿಗೆ ಹಂಚಿಕೆಯಾಗಿರುವ ಪ್ರಕ್ರಿಯೆಗಳನ್ನು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ವರ್ಗಾಯಿಸಿ ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.
ನಮ್ಮ ತಾಲ್ಲೂಕಿನ ಸಂಬoಧಿಸಿದ ಅಧಿಕಾರಿಗಳು ವಾರ್ಡ್ ಸಭೆ, ಗ್ರಾಮ ಸಭೆ ಮಾಡದೆ ಕಾಮಗಾರಿಗಳನ್ನು ಪ್ರಾರಂಭಿಸಿ ಪಂಚಾಯತ್ ಕಾಯ್ದೆಯನ್ನು ಉಲ್ಲಂಘಿಸಿ ಪಂಚಾಯತ್ ಕಾಯ್ದೆಗೆ ಮಸಿ ಬಳೆದು ಸರ್ವಾಧಿಕಾರಿಯಾಗಿ ಏಕ ಪಕ್ಷೀಯ ನಿರ್ಧಾರವನ್ನು ಸಂಬoಧಪಟ್ಟ ಅಧಿಕಾರಿಗಳು ಕೈಗೊಂಡಿರುವುದು ಖಂಡನೀಯ. ಇಂಥಾ ಬ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು
ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು ಕೊಟ್ಯಂತರ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗುತ್ತಿಗೆದಾರರ ನಿರ್ಲಕ್ಷ್ಯವೋ, ಅಧಿಕಾರಿಗಳ ಬೇಜವಾಬ್ದಾರಿಯಿಂದಲೋ ಮನೆಗಳ ಮುಂದೆ ಮೊಣಕಾಲುದ್ಧ ಗುಂಡಿಗಳು ಬಿದ್ದಿದ್ದು ಸಣ್ಣ ಮಕ್ಕಳನ್ನು ಮನೆಯಿಂದ ಹೊರ ಬಿಡಲಾಗದಂತಹ ಸನ್ನಿವೇಶ ಸೃಷ್ಟಿಯಾಗಿದೆ.
ಕಳಪೆ ಮಟ್ಟದ ಪೈಪುಗಳು, ನಳಗಳು, ಹಾಗೂ ಹಳ್ಳಿಗಳಲ್ಲಿ ಓಣಿ ರಸ್ತೆಗಳನ್ನು ಹಾಳು ಮಾಡಿ ಬೇಕಾ ಬಿಟ್ಟಿ ಕಳಪೆ ಕಾಮಗಾರಿಯನ್ನು ಮಾಡಿರುತ್ತಾರೆ. ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಹಳ್ಳಿಗಳ ಜನರ ನೀರಿನ ದಾಹ ತೀರಿಸುವ ಬದಲು ಅಧಿಕಾರಿಗಳು, ಗುತ್ತಿಗೆದಾರರು, ಮತ್ತು ರಾಜಕಾರಣಿಗಳು ತಮ್ಮ ಹಣದ ದಾಹವನ್ನು ತೀರಿಸಿಕೊಂಡಿದ್ದಾರೆ. ಈ ಕೂಡಲೇ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಉನ್ನತ ಮಟ್ಟದ ಅಧಿಕಾರಿಗಳ ತನಿಖೆ ತಂಡ ರಚಿಸಿ ತಪ್ಪತಸ್ಥರ ವಿರುದ್ಧ ಸೂಕ್ತ ಕಾನೂನಿನ ಕ್ರಮಕ್ಕಾಗಿ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು