
ಕೆ.ಆರ್.ಪೇಟೆ: ಮೇ.26:- ಚನ್ನಾಪುರ ಶಾಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳ ಜಲಕ್ರೀಡೆಯಲ್ಲಿ ಕುಣಿದು ಕುಪ್ಪಳಿಸಿದ ಮಕ್ಕಳು ಹಾಗೂ ಗ್ರಾಮಸ್ಥರು. ಬೆಂಕಿ ಅವಘಡಗಳು ಸಂಭವಿಸುವುದನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕಾದದು ನಮ್ಮೆಲ್ಲರ ಕರ್ತವ್ಯ ಎಂದು ಅಗ್ನಿಶಾಮಕ ಠಾಣಾಧಿಕಾರಿ ಶಿವಣ್ಣ ತಿಳಿಸಿದರು.
ಅವರು ತಾಲೂಕಿನ ಶೀಳನೆರೆ ಹೋಬಳಿಯ ಚನ್ನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬೆಂಕಿ ಅನಾಹುತಗಳ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷತೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಗಳಲ್ಲಿ ಗ್ಯಾಸ್ ಬಳಕೆ ಹೆಚ್ಚಾಗಿದ್ದು ಬೆಂಕಿ ಅನಾಹುತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿವೆ.ಗ್ಯಾಸ್ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿಯದು.ಗ್ಯಾಸ್ ಬಳಸುವಾಗ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಅಕಸ್ಮಾತ್ ಅನಾಹುತಗಳು ಸಂಭವಿಸಿದಾಗ ಅಗ್ನಿನಂದಕಗಳನ್ನು ಇಟ್ಟುಕೊಳ್ಳುಬೇಕು. ಬೆಂಕಿ ಅವಘಡ ಸಂಭವಿಸಿದರೆ ಬೆಂಕಿ ಮುಂದಕ್ಕೆ ಚಲಿಸದಂತೆ ಪ್ರಾಥಮಿಕವಾಗಿ ಮಣ್ಣು,ನೀರು ಹಾಕುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡಬೇಕು.ಗ್ಯಾಸ್ ಲೀಕೇಜ್‍ನಿಂದ ಬೆಂಕಿ ಅನಾಹುತ ಸಂಭವಿಸಿದರೆ ಗೋಣಿಚೀಲವನ್ನು ನೀರಿಗೆ ಅದ್ದಿ ಸಿಲಿಂಡರ್ ಸುತ್ತಲೂ ಸುತ್ತುವ ಮೂಲಕ ಬೆಂಕಿ ಆರಿಸಬಹುದು. ಗ್ರಾಮಗಳಲ್ಲಿ ಹುಲ್ಲಿನ ಮೆದೆಗಳನ್ನು ಆದಷ್ಟು ಅಂತರಗಳಲ್ಲಿ ಹಾಕಿಕೊಳ್ಳಬೇಕು.ನಿಮ್ಮ ಸಮೀಪದಲ್ಲಿ ಬೆಂಕಿ ಅನಾಹುತಗಳು ಸಂಭವಿಸಿದರೆ ಸಮೀಪದ ಅಗ್ನಿಶಾಮಕ ಠಾಣೆಗೆ ವಿಚಾರ ತಿಳಿಸಬೇಕು.ಆಗುವ ಹೆಚ್ಚಿನ ಅನಾಹುತಗಳನ್ನು ತಪ್ಪಿಸಬೇಕು ಎಂದರು.
ಮುಖ್ಯ ಶಿಕ್ಷಕ ಮರುವನಹಳ್ಳಿಬಸವರಾಜು ಮಾತನಾಡಿ ಕಳೆದ ಹದಿನೈದು ದಿನಗಳಿಂದ ಕ್ವಾಲಿಟಿ ಎಜುಕೇಷನ್ ಟ್ರಸ್ಟ್ ಸಹಯೋಗದೊಂದಿಗೆ ನಮ್ಮ ಶಾಲೆಯಲ್ಲಿ ಬೇಸಿಗೆ ಶೀಬಿರ ಆಯೋಜಿಸಿದ್ದು ಇದರ ಪರಿಣಾಮವಾಗಿ ಈ ಗ್ರಾಮದ ಪೆÇೀಷಕರು ನಮ್ಮ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲು ಮಾಡಿರುವುದು ಸಂತಸದ ವಿಷಯ. ಮಕ್ಕಳಿಲ್ಲದೇ ಮುಚ್ಚುವ ಹಂತದಲ್ಲಿದ್ದ ಶಾಲೆ ಈಗ ಉತ್ಸಾಹ ತುಂಬಿದ ಚಿಲುಮೆಯಂತೆ ನಲಿಯುತ್ತಿದೆ. ಇಲ್ಲಿನ ಅಂಗನವಾಡಿ ಶಿಕ್ಷಕಿ ಪ್ರಮೀಳ ಹಾಗೂ ಶಿಕ್ಷಕರ ಪರಿಶ್ರಮದಿಂದ ಶಾಲೆಗೆ ಕಳೆ ಬಂದಿದೆ. ಇಂದು ಬೇಸಿಗೆ ಶೀಬಿರದ ಅಂತಿಮ ದಿನ ಎಲ್ಲರೂ ಅಗ್ನಿಶಾಮಕ ಸಿಬ್ಬಂದಿಗಳ ಸಹಕಾರದಿಂದ ಜಲಕ್ರೀಡೆಯ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂತಸಪಟ್ಟಿದ್ದೀರಿ ಎಂದರು.
ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಅಗ್ನಿಶಾಮಕರಾದ ದಿನೇಶ್, ಸಂತೋಷ್, ಕಿರಣ್, ರಾಜೇಂದ್ರ, ಶಿಕ್ಷಕ ಮಂಜು, ಅಂಗನವಾಡಿ ಶಿಕ್ಷಕಿ ಬಿ.ಬಿ.ಪ್ರಮೀಳ, ಎಸ್‍ಡಿಎಂಸಿ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷೆ ಶೃತಿ, ಸದಸ್ಯೆ ಮಮತಾ, ಗ್ರಾಮದ ಮುಖಂಡರಾದ ಮಂಜೇಗೌಡ ವಿಜಯ್‍ಕುಮಾರ್, ವಸಂತಕುಮಾರ್, ಮಂಜೇಗೌಡ, ಸೇರಿದಂತೆ ಹಲವರು ಹಾಜರಿದ್ದರು