ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಪತ್ರಿಕಾ ದಿನಾಚರಣೆ

ಧಾರವಾಡ,ಜು23: ಧಾರವಾಡ ಜರ್ನಲಿಸ್ಟ್ ಗಿಲ್ಡ್ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ಜರುಗಿತು.
ಪಬ್ಲಿಕ್ ಆಫ್ ಕರ್ನಾಟಕ ಮುಖ್ಯಸ್ಥರಾದ ಸುಭಾಷ್ ಹೂಗಾರ ಹಾಗೂ ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ವಿಭಾಗದ ಸಿಇಓ ಮೋಹನ್ ಹೆಗಡೆ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಬ್ಲಿಕ್ ಆಫ್ ಕರ್ನಾಟಕ ಮುಖ್ಯಸ್ಥ ಸುಭಾಷ್ ಹೂಗಾರ ಪತ್ರಿಕೋದ್ಯಮ ಇಂದು ಉನ್ನತವಾಗಿ ಬೆಳೆಯುತ್ತಿದ್ದು ಪ್ರಸ್ತುತ ಡಿಜಿಟಲ್ ವ್ಯವಸ್ಥೆ ಕ್ಷಣ ಕ್ಷಣಕ್ಕೂ ಮಾಹಿತಿ ನೀಡುವ ಸುದ್ದಿಲೋಕವಾಗಿ ಬದಲಾವಣೆ ಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ವಿಭಾಗದ ಸಿಇಓ ಮೋಹನ್ ಹೆಗಡೆ ಅವರು ಮಾತನಾಡಿ, ಹೊಸ ಹೊಸ ಬರವಣಿಗೆ ಶೈಲಿ ಪರಿಚಯಿಸುವ ನಿಟ್ಟಿನಲ್ಲಿ ಇಂದಿನ ಯುವ ಪತ್ರಕರ್ತ ಸಮೂಹ ಬಹಳಷ್ಟು ಉತ್ಸುಕವಾಗಿ ಕೆಲಸ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಬಸವರಾಜ ಹೊಂಗಲ, ಉಪಾಧ್ಯಕ್ಷ ಬಸವರಾಜ ಅಳಗವಾಡಿ, ವಾರ್ತಾ ಇಲಾಖೆ ಅಧಿಕಾರಿ ಮಂಜುನಾಥ ಡೊಳ್ಳಿನ, ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ್, ಪ್ರಾಧ್ಯಾಪಕರಾದ ಪೆÇ್ರ. ಜೆ ಎಂ ಚಂದುನವರ, ಡಾ. ಸಂಜೀವಕುಮಾರ ಮಾಲಗತ್ತಿ, ಡಾ. ಪ್ರಭಾಕರ ಕಾಂಬ್ಳೆ, ಡಾ. ವಿಜಯಲಕ್ಷ್ಮೀ ಎಂಡಿಗೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು.