ಜರ್ನಲಿಸ್ಟ್ ಗಿಲ್ಡ್ ಪದಾಧಿಕಾರಿಗಳ ಆಯ್ಕೆ

ಧಾರವಾಡ, ಏ3: ಜರ್ನಲಿಸ್ಟ್ ಗಿಲ್ಡ್ ನೂತನ ಪದಾಧಿಕಾರಿಗಳನ್ನು ನಗರದ ಗಿಲ್ಡ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ 11ಜನ ರನ್ನು ಪದಾಧಿಕಾರಿಗಳನ್ನು ಸರ್ವಾನುಮತದಿಂದ ರವಿವಾರ ಆಯ್ಕೆ ಮಾಡಲಾಯಿತು.
ಜರ್ನಲಿಸ್ಟ ಗಿಲ್ಡ್ ಅಧ್ಯಕ್ಷರಾಗಿ ಬಸವರಾಜ ಹಿರೇಮಠ್, ಉಪಾಧ್ಯಕ್ಷರಾಗಿ ನಾಗರಾಜ, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ್ ಕಗ್ಗನವರ್, ಖಜಾಂಚಿಯಾಗಿ ಮಂಜುನಾಥ್ ಅಂಗಡಿ, ಕಾರ್ಯಕಾರಿ ಸಮಿತಿಗೆ ಸೂರ್ಯಕಾಂತ ಶಿರೂರ್, ಆರ್. ಶ್ರೀನಿಧಿ, ಶ್ರೀಕಾಂತ್ ಬೆಟಗೇರಿ, ಮಹಾಂತೇಶ ಕಣವಿ, ಶಿವಕುಮಾರ್ ಹಳ್ಯಾಳ, ಬಸವರಾಜ ಅಳಗವಾಡಿ, ಸದ್ದಾಂ ಮುಲ್ಲಾ ಅವರನ್ನು ಸರ್ವ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದರು. ಪದಾಧಿಕಾರಿಗಳಿಗೆ ಜಯಕರ್ನಾಟಕ ಸಂಘಟನೆಯ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಧಾರವಾಡ ಜಿಲ್ಲಾ ಅಧ್ಯಕ್ಷ ಸುಧೀರ್ ಎಂ.ಮುಧೋಳ, ಪದಾಧಿಕಾರಿಗಳಾದ ಲಕ್ಷ್ಮಣ ದೊಡ್ಡಮನಿ, ಮಂಜುನಾಥ್ ಸುತಗಟ್ಟಿ, ಪರುಶುರಾಮ ಚಂದ್ರು ಅಂಗಡಿ, ದೊಡ್ಡಮನಿ, ಮುತ್ತು ಕುಲಕರ್ಣಿ, ಜಿಲಾನಿ ಕಾಜಿ, ಮಂಜುನಾಥ್ ಅಮ್ಮಿನಬಾವಿ, ಮಂಜುನಾಥ್ ಜಾಲಗಾರ, ರಾಜು ಚಲವಾದಿ, ಪ್ರೇಮ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.