ಜರ್ನಲಿಸ್ಟ್ ಗಿಲ್ಡ್‍ಗೆ ಅವಿರೋಧ ಆಯ್ಕೆ

ಧಾರವಾಡ,ಮಾ29: ಧಾರವಾಡ ಜರ್ನಲಿಸ್ಟ್ ಗಿಲ್ಡ್ ನೂತನ ಪದಾಧಿಕಾರಿಗಳನ್ನು ರವಿವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಗರದ ಗಿಲ್ಡ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ 11 ಜನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಸವರಾಜ ಹಿರೇಮಠ, ಉಪಾಧ್ಯಕ್ಷರಾಗಿ ನಾಗರಾಜ ಕಿಣಗಿ, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ ಕಗ್ಗಣ್ಣವರ, ಖಜಾಂಚಿಯಾಗಿ ಮಂಜುನಾಥ ಅಂಗಡಿ ಅವರನ್ನು ಆಯ್ಕೆ ಮಾಡಿದರೆ ಕಾರ್ಯಕಾರಿ ಸಮಿತಿಗೆ ಸೂರ್ಯಕಾಂತ ಶಿರೂರ,ಆರ್.ಶ್ರೀನಿಧಿ, ಶ್ರೀಕಾಂತ ಬೆಟಗೇರಿ, ಮಹಾಂತೇಶ ಕಣವಿ, ಶಿವಕುಮಾರ ಹಳ್ಯಾಳ, ಬಸವರಾಜ ಅಳಗವಾಡಿ, ಸದ್ದಾಂ ಮುಲ್ಲಾ ಅವರನ್ನು ಸರ್ವ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದರು.