ಜಯ ವಿಜಯ ಸ್ಪೋರ್ಟ್ಸ್ ಕ್ಲಬ್‌ನಿಂದ ಬೇಸಿಗೆ ಕ್ರಿಕೆಟ್ ಶಿಬಿರ

ರಾಯಚೂರು,ಏ.೪- ಜಯ ವಿಜಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಅಝಾದ್ xi ಕ್ರಿಕೆಟ್ ಕ್ಲಬ್ ಸಹಯೋಗದಲ್ಲಿ ಬೇಸಿಗೆ ಕ್ರಿಕೆಟ್ ಶಿಬಿರವನ್ನು ನಗರದ ನವೋದಯ ಮೆಡಿಕಲ್ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಯ ವಿಜಯ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಕೆ.ಶೀತುಮಾದವರಾವ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ಬೇಸಿಗೆ ಕ್ರಿಕೆಟ್ ಶಿಬಿರವು ೨ ತಿಂಗಳ ಕಾಲ ನಡೆಯಲಿದೆ ಎಂದ ಅವರು, ಪ್ರತಿಯೊಬ್ಬರೂ ಶಿಬಿರವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೇವಲ ೨೫ ಅಟಗಾರರಿಗೆ ಪ್ರವೇಶಕ್ಕೆ ಅವಕಾಶವಿದೆ.ನುರಿತ ತರಬೇತುದಾರ ಹಾಗೂ ಹಿರಿಯ ಕ್ರಿಕೆಟ್ ಆಟಗಾರರು ತರಬೇತಿ ನೀಡಲಿದ್ದಾರೆ.ತರಬೇತಿ ಬೆಳಿಗ್ಗೆ ಹಾಗು ಸಾಯಂಕಾಲ ನಡೆಯುತ್ತಿದೆ. ಬೆಳಗಿನ ಸಮಯ ದೈಹಿಕ ಶಿಕ್ಷಣ ಹಾಗು ಕ್ರಿಕೆಟ್ ಆಡಲು ಬೇಕಾದ ಟೆಕ್ನಿಕ್ಸ್ ಡ್ರಿಲ್ ಫೀಲ್ಡಿಂಗ್ ಹೇಳಿಕೊಡಲಾಗುತ್ತದೆ.ಸಾಯಂಕಾಲ ನೆಟ್ಸ್ ಬ್ಯಾಟಿಂಗ್ ಬೌಲಿಂಗ್ ಅಭ್ಯಾಸ ಹಾಗೂ ವಾರಾಂತ್ಯದಲ್ಲಿ ೧ ಅಥವಾ ೨ ಪಂದ್ಯ ಆಡುವ ಅವಕಾಶ ಇರುತ್ತದೆ ಎಂದರು.
ಪ್ರತಿ ಆಟಗಾರನಿಗೆ ಯುನಿಫಾರ್ಮ್ ಡ್ರೆಸ್ ಕೊಡುವ ವ್ಯವಸ್ಥೆ ಮಾಡಕಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಈರಣ್ಣ ಚಿತ್ರಗಾರ ಮೊಬೈಲ್ ನಂಬರ್ ೯೪೪೮೧೩೩೪೦೦ ಗೆ ಸಂಪರ್ಕಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಈರಣ್ಣ ಚಿತ್ರಗಾರ, ವರ್ಥಾಸಾರತಿ ಕನಕವೀಡು,ಮಂಜುನಾಥ ಹಾನಗಲ್ ಮತ್ತು ಶ್ರೀನಿವಾಸ್ ನಾಯಕ್ ಇದ್ದರು.