ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳ ಪದಗ್ರಹಣ


ಧಾರವಾಡ ನ.22- ಸರಕಾರಿ ನೌಕರರ ಸಭಾಭವನದಲ್ಲಿ ಧಾರವಾಡ ಜಿಲ್ಲಾ ಮಟ್ಟದ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉದ್ಘಾಟಕರಾಗಿ ಆಗಮಿಸಿದ ವಿದ್ಯಾಗಿರಿ ಪೋಲಿಸ ಇಸ್ಸಪೆಕ್ಟರ ಮಹಾಂತೇಶ ಬಸಾಪೂರ ಅವರು ಮಾತನಾಡಿ “ಇಂದು ನಡೆಯುತ್ತಿರುವ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಅರ್ಥಪೂರ್ಣ ಕಾರ್ಯಕ್ರಮದ ಮುಖಾಂತರ ಜರುಗಿಸಿದ ಸಂಘಟನೆಗೆ ಅಭಿನಂದನೆಗಳು. ಸಂಘಟನೆಯ ಧ್ಯೇಯೋದ್ದೇಶಗಳನ್ನು ನೀವೆಲ್ಲರೂ ಅರ್ಥ ಮಾಡಿಕೊಂಡು ಸಮಾಜಮುಖಿ ಕಾರ್ಯಗಳನ್ನು ಕಾನೂನುಬದ್ಧವಾಗಿ ಮಾಡಿಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಈಶಪ್ಪ ನಾಯ್ಕ, ರಾಜ್ಯ ಉಪಾಧ್ಯಕ್ಷರು ಹಾಗೂ ಧಾರವಾಡ ಜಿಲ್ಲಾ ಸಂಘಟನೆಯ ಉಸ್ತುವಾರಿ, ಮಾರುತಿ ಬಾರಕೇರ, ರಾಜ್ಯ ಉಪಾಧ್ಯಕ್ಷರು, ಚಂದ್ರು ಚವ್ಹಾಣ, ರಾಜ್ಯ ಪ್ರದಾನ ಕಾರ್ಯದರ್ಶಿ, ರಮೇಶ ಆನವಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಇವರೆಲ್ಲರೂ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಧೀರ ಎಂ. ಮುಧೋಳ, ಜಿಲ್ಲಾ ಅಧ್ಯಕ್ಷರು, ಜಯ ಕರ್ನಾಟಕ ಸಂಘಟನೆ ಇವರು ವಹಿಸಿದ್ದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿಗಳಾದ ಈಶಪ್ಪ ನಾಯಕ ಮಾತನಾಡಿ “ಸಂಘಟನೆ ರಾಜ್ಯವ್ಯಾಪಿ ಪ್ರತಿಯೊಂದು ಗ್ರಾಮಗಳಲ್ಲೂ ಘಟಕಗಳನ್ನು ಹೊಂದುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಸಂಘಟನೆಯ ಧ್ಯೇಯೋದ್ದೇಶಗಳನ್ನು ಸಂಘಟನೆಯ ಏಳಿಗೆಗಾಗಿ ಪ್ರತಿಯೊಬ್ಬ ಪದಾಧಿಕಾರಿ ಹಾಗೂ ಕಾರ್ಯಕರ್ತರು ಶ್ರಮಿಸಬೇಕು” ಎಂದು ಕರೆ ನೀಡಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಸುಧೀರ ಎಂ. ಮುಧೋಳ ಮಾತನಾಡಿ “ಧಾರವಾಡ ಜಿಲ್ಲೆಯಲ್ಲಿ 2ನೇ ಬಾರಿ ನಾನು ಜಿಲ್ಲಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದು, ನನ್ನೊಂದಿಗೆ ಪದಗ್ರಹಣ ಮಾಡಿದ ಎಲ್ಲಾ ಜಿಲ್ಲಾ ಮಟ್ಟ ಹಾಗೂ ತಾಲೂಕಾ ಮಟ್ಟದ ಪದಾಧಿಕಾರಿಗಳು ಸಂಘಟನೆಯನ್ನು ಉನ್ನತ ಮಟ್ಟಕ್ಕೆ ಒಯ್ಯುವ ನಿಟ್ಟಿನಲ್ಲಿ ಪ್ರಗತಿಪರ ಹಾಗೂ ಜನಪರ ಹೋರಾಟಗಳನ್ನು ಮಾಡುವ ಪ್ರಸಂಗ ಬಂದರೂ ತಾವೆಲ್ಲರೂ ಸಂಘಟನೆಗೆ ಸಹಕಾರ ನೀಡಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಲಕ್ಷ್ಮಣ ದೊಡ್ಡಮನಿ, ಯುವ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ ಸುತಗಟ್ಟಿ ಹಾಗೂ ಪದಾಧಿಕಾರಿಗಳಾದ ಜಿಲಾನಿ ಖಾಜಿ, ಎಂ.ಎನ್. ಮಲ್ಲೂರ, ಕರಿಯಪ್ಪ ಮಾಳಗಿಮನಿ, ಸದ್ದಾಂ ನದಾಫ, ನಾರಾಯಣ ಮಾದರ, ಶಿಡ್ಲಪ್ಪ ಹೆಗಡೆ, ಶಬ್ಬೀರ ಅತ್ತಾರ, ಪರಶುರಾಮ ದೊಡ್ಡಮನಿ, ಹನುಮಂತ ಮೊರಬ, ಹನಮಂತ ಜೋಲಿ, ವಿಠ್ಠಲ ಜಮಾದಾರ, ಮುತ್ತು ಕುಲಕರ್ಣಿ, ಸುರೇಶ ದೊಡ್ಡಮನಿ, ಬಸವರಾಜ ಮಾದರ, ಆನಂದ ತಳವಾರ, ಭಾರತಿ ಎಂ. ಕಣಕಣ್ಣವರ, ಚನ್ನಮ್ಮ ಕಾಳಿ, ಮುಂತಾದವರು ಪಾಲ್ಗೊಂಡಿದ್ದರು.