ಜಯ ಕರ್ನಾಟಕ ಸಂಘಟನೆಯಿಂದ ರೈತರಿಗೆ ಬಿತ್ತನೆ ಬೀಜ ವಿತರಣೆ


ಧಾರವಾಡ ನ.3- ಕನ್ನಡ ರಾಜ್ಯೋತ್ಸವವನ್ನು ಜಯ ಕರ್ನಾಟಕ ಸಂಘಟನೆ ವಿಭಿನ್ನವಾಗಿ ಆಚರಣೆ ಮಾಡುವ ಮೂಲಕ ಸಂಘಟನೆಯ ಉದ್ದೇಶ ಮಹತ್ವವನ್ನು ಸಾರಿ ಮಾದರಿಯಾಗಿದೆ. ದೇಶದ ಬೆನ್ನೆಲಬು ಎಂದು ಕರೆಸಿಕೊಳ್ಳುವ ಅನ್ನದಾತ ರೈತರಿಗೆ ಹಿಂಗಾರು ಬೀಜಗಳನ್ನು ನೀಡುವ ಮೂಲಕ ಸಹಾಯ ಮಾಡುತ್ತಿರುವುದು ಸಂತೋಷ. ಸರಕಾರ ರೈತರ ಮೂಗಿನ ನೇರಕ್ಕೆ ಇರುವ ಬದಲು ವಾಸ್ತವತೆಯನ್ನು ಅರಿಯುವ ಇಂತಹ ಕಾರ್ಯ ಮಾಡಬೇಕು ಎಂದು ಹೈಕೋರ್ಟಿನ ಹಿರಿಯ ನ್ಯಾಯವಾದಿಗಳು ಹೋರಾಟಗಾರರಾದ ಬಿ.ಡಿ.ಹಿರೇಮಠ ಹೇಳಿದರು.
ಜಯ ಕರ್ನಾಟಕ ಧಾರವಾಡ ಜಿಲ್ಲಾ ಘಟಕದಿಂದ ನಗರದ ಭೂಸಪ್ಪ ಚೌಕನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೆÇಜೆ ಮತ್ತು ರೈತರಿಗೆ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕದಲ್ಲಿ ಕನ್ನಡವೇ ಸತ್ಯ.. ಕನ್ನಡವೇ ನಿತ್ಯ ಎನ್ನುವ ಹಾಗೇ, ಪ್ರತಿಯೊಬ್ಬರ ಜೀವನ ನಡೆಯಬೇಕಾದರೇ ರೈತ ವರ್ಗವೇ ಮುಖ್ಯ ಎಂಬುದನ್ನ ಅರಿತ ಜಯ ಕರ್ನಾಟಕ ಸಂಘಟನೆ ರೈತರಿಗೆ ಬಿತ್ತುವ ಬೀಜವನ್ನ ನೀಡಿ, ಖುಷಿಯನ್ನ ಅನುಭವಿಸಿ ಸಂತೋಷ ಮತ್ತೆಲ್ಲಿಯೋ ಸಿಗುವುದಿಲ್ಲಾ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿಗಳಾದ ಡಾ. ಸಿದ್ರಾಮ ಕಾರಣಿಕ ಮಾತನಾಡಿ ಇಂದಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ಉಳಿಸುವ ಕಾರ್ಯವನ್ನು ಕನ್ನಡ ಸಂಘಟನೆಗಳು ಮಾಡುತ್ತಿವೆ ಎಂದು ಹೇಳಿದರು.ವೈದ್ಯರಾದ ಡಾ. ಸಂತೋಷ ಮಠಪತಿ ಮಾತನಾಡಿ ರೈತರು ಆಧ್ಯಾತ್ಮಿಕ ಸಂಗತಿಗಳನ್ನು ಅರಿತು ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಬೇಕು ಮತ್ತು ಮೂಢನಂಬಿಕೆಗಳಿಗೆ ಮಾರುಹೋಗಬಾರದು ಎಂದು ಹೇಳಿದರು.
ಹಿರಿಯ ಪತ್ರಕರ್ತ ಡಾ. ವೆಂಕನಗೌಡ ಪಾಟೀಲ ಮಾತನಾಡಿ ಜಯ ಕರ್ನಾಟಕ ಸಂಘಟನೆ ಇಂತಹ ಯೋಜನೆಯನ್ನ ರೂಪಿಸಿದ್ದು ನಂಗೆ ಹರ್ಷವನ್ನು ತಂದಿದೆ. ರೈತರಿಗೆ ಸರಕಾರ ಉತ್ತಮ ಮಾರುಕಟ್ಟೆ ಒದಗಿಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.