ಜಯ ಕರ್ನಾಟಕ ಸಂಘಟನೆಯಿಂದ ರಾಜ್ಯೋತ್ಸವ


ಧಾರವಾಡ, ನ2: ಜಯ ಕರ್ನಾಟಕ ಸಂಘಟನೆವತಿಯಿಂದ ನಗರದ ಜುಬ್ಲಿ ಸರ್ಕಲ್‍ನಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸುಧೀರ ಮುಧೋಳ, ಕರ್ನಾಟಕ ಸಾಹಿತಿ,ಕವಿಗಳ ನಾಡು.ಕನ್ನಡಕ್ಕೆ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದೇ ಇದಕ್ಕೆ ನಿದರ್ಶನ.
ಕರ್ನಾಟಕ ಏಕೀಕರಣ ಚಳುವಳಿಗೆ ಅನೇಕ ಮಹಣಿಯರು ಶ್ರಮಿಸಿದ್ದು,ಅವರ ಪರಿಶ್ರಮದಿಂದ ಅಖಂಡ ಕರ್ನಾಟಕವಾಗಿದೆ. ಈ ಹಿನ್ನಲೆಯಲ್ಲಿ ಆಲೂರು ವೆಂಕಟರಾವ, ಮೊಹರೆ ಹನಮಂತರಾವ, ಪಾಟೀಲ ಪುಟ್ಟಪ್ಪರಂಥ ಎಲ್ಲ ಮಹನೀಯರನ್ನು ಸ್ಮರಿಸಬೇಕಿದೆ ಎಂದರು.
ಲಕ್ಷ್ಮಣ್. ಬ. ದೊಡ್ಡಮನಿ, ಚಂದ್ರು ಅಂಗಡಿ, ಕರೆಪ್ಪ ಮಾಳಗಿಮನಿ, ಮಂಜುನಾಥ ಸುತಗಟ್ಟಿ, ವಿನಾಯಕ ಜಿಜಿ, ಎಂ.ಎನ್.ಮಲ್ಲೂರ್, ನಾರಾಯಣ ಮಾದರ, ರಮೇಶ ಅರಳಿಕಟ್ಟಿ, ಸುರೇಶಣ್ಣ, ನವಲೂರ್ ಹನುಮಂತ ಮೊರಬ, ಪಂಚಯ್ಯ ಪೂಜಾರ, ಮಂಜು ಜಾಲಗಾರ, ಮಂಜು ಅಮೀನಬಾವಿ, ಮುನಿರಾಜು ಚಲವಾದಿ ಸಹದೇವ್, ಪವನ್ ಕುಮಾರ್ ಅನಿಲ್ ದೊಡ್ಡಮನಿ ರಹಮಾನಸಾಬ ನಿಚ್ಚುಣಕಿ, ಅಶೋಕ್ ಭಂಡಾರಿ ಇನ್ನಿತರರು ಉಪಸ್ಥಿತರಿದ್ದರು.