ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ

ಧಾರವಾಡ ಎ.08: ನಗರದ ಜೀವನದಿ ಶಾಲ್ಮಲಾ ನದಿಯಿಂದ ಸಂಗ್ರಹವಾಗುವ ಸೋಮೇಶ್ವರ ಕೆರೆಯ ನೀರನ್ನು ಸಣ್ಣ ನೀರಾವರಿ ಇಲಾಖೆ ಹಾಗೂ ಗುತ್ತಿಗೆದಾರರು ಸೇರಿ ಖಾಲಿ ಮಾಡಿದ್ದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯಿಂದ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶಾಲ್ಮಲಾ ನದಿಯ ನೀರು ಜಾನುವಾರುಗಳಿಗೆ ಹಾಗೂ ವಿಶೇಷವಾಗಿ ಪ್ರಾಣಿ, ಪಕ್ಷಿಗಳಿಗೆ ಮತ್ತು ಜಲಚರ ಜೀವಿಗಳಿಗೆ ಸಂಜೀವಿನಿಯಾಗಿದೆ. ಈ ಪ್ರದೇಶದ ನಿವಾಸಿಗಳಿಗೆ ಹಾಗೂ ಮೀನುಗಾರಿಕೆಗೆ ಜೀವಜಲ ಅನುಕೂಲವಾಗಿತ್ತು. ನೀರಾವರಿ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಸೋಮೇಶ್ವರದ ಕೆರೆ ನೀರು ಪೆÇೀಲಾಗಿದೆ. ಅಭಿವೃದ್ಧಿ ಯೋಜನೆಯ ನೆಪದಲ್ಲಿ ಒಡ್ಡು ಒಡೆದು ಅಪಾರ ಪ್ರಮಾಣದ ನೀರು ಪೆÇೀಲು ಮಾಡಿರುವುದು ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ಸಂಘಟನೆಯ ಧಾರವಾಡ ಜಿಲ್ಲಾಧ್ಯಕ್ಷ ಸುಧೀರ ಮುದೋಳ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಉಣಕಲ್ ಕೆರೆ, ಕೆಲಗೇರಿ ಸೇರಿದಂತೆ ಎಲ್ಲಾ ಕರೆಯಲ್ಲಿ ಅಂತರಗಂತ ಕಸ ಬೆಳದಿದೆ . ಹಾಗಂತ ಹು-ಧಾ ಮಹಾನಗರ ಪಾಲಿಕೆ ಸ್ವಚ್ಛಗೊಳಿಸುವಾಗ ನೀರನೂ ಪೆÇೀಲುಗೊಳಿಸಿಲ್ಲ. ಆದರೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಶಾಲ್ಮಲಾ ನದಿಯ ಉಗಮ ಸ್ನಾನದಿಂದ ಹುಟ್ಟಿರುವ ಸೋಮೇಶ್ವರ ಕೆರೆಯ ಬರಿದು ಮಾಡಿರುವುದು ಯಾವ ಪುರುಷಾರ್ಥಕ್ಕೆ. ತಕ್ಷಣ ತಾವು ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡುತ್ತಿರುವ ಸಣ್ಣ ನೀರಾವರಿ ಇಲಾಖೆ ಹಾಗೂ ಗುತ್ತಿಗೆದಾರರ ವಿರುದ್ಧ ಹೋರಾಡಲು “ ಸೋಮೇಶ್ವರ ಕೆರೆ ಉಳಿಸಿ , ಶಾಲ್ಮಲಾ ನದಿಯ ಸಾರ್ಥಕತೆಯನ್ನು ಕಾಪಾಡಿ ” ಎಂಬ ಘೋಷವಾಕ್ಯದೊಂದಿಗೆ ಜಯ ಕರ್ನಾಟಕ ಸಂಘಟನ ಜಾಗೃತಿ ಜಾಥಾವನ್ನು ನಡೆಸಿತು.
ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಗೌರವ ಅಧ್ಯಕ್ಷ ಲಕ್ಷ್ಮಣ ದೊಡ್ಡಮನಿ , ಚಂದ್ರು ಅಂಗಡಿ, ಮಂಜುನಾಥ ಸುತಗಟ್ಟಿ , ಪರಶುರಾಮ ದೊಡ್ಡಮನಿ, ಶ್ರೀಕಾಂತ ತಳವಾರ , ರಾಜು ಚಲವಾದಿ, ಜಿಲಾನಿ ಖಾಜಿ, ಗಂಗಾಧರ ಹಿರೇಮಠ, ಅರುಣ ಸಂಗಟಿ, ಅಕ್ಷಯ , ನಿಂಗರಾಜ ಅಂದರಖಂಡಿ, ಮಂಜುನಾಥ ಅಮ್ಮಿನಭಾವಿ, ಮಂಜುನಾಥ ಜಾಲಗಾರ, ವಿನಾಯಕ ಜಿ.ಜಿ. , ಹರೀಶ ಕಾಳೆ, ಪ್ರಶಾಂತ ಅಕ್ಕಿ ,ಕರೆಪ್ಪ ಮಾಳಗಿಮನಿ, ಸಿದ್ಧಪ್ಪ ಹೆಗಡೆ, ವಿನಾಯಕ ಆಲ್ಯಾರ, ಗುರು ಗುಮ್ಮಗೋಳಮಠ, ಕಲ್ಲಪ್ಪ ಶೀಗೀಹಳ್ಳಿ, ಎಮ್ ಎನ್ ಮಲ್ಲೂರ, ಮುತ್ತು ಕುಲಕರ್ಣಿ, ನಾರಾಯಣ ಮಾದರ ಹನಮಂತ ಮೊರಬ, ಶಬೀರ ಅತ್ತಾರ, ಮಂಜುನಾಥ ಹೆಗಡೆ, ದೀಪಕ ಹಿರೇಮನಿ, ಶರಣಪ್ಪ ಕೊಟಬಾಗಿ , ಶಾನವಾಜ , ರಹೀಮ ಇನ್ನಿತರರು ಭಾಗವಹಿಸಿದ್ದರು.