ಜಯಾನಂದಯ್ಯಾ ಸ್ವಾಮಿಗೆ ಪ್ರಶಂಸನಾ ಪತ್ರ ವಿತರಣೆ

ಕಲಬುರಗಿ:ಜ.28: ನಗರದ ಉಚ್ಛ ನ್ಯಾಯಲಯದಲ್ಲಿ ಇತಿಚೇಗೆ ನಡೆದ 75ನೇ ಗಣರಾಜ್ಯೋತ್ಸವದ ದಿನಾಚರಣೆಯಲ್ಲಿ ಹೈಕೋರ್ಟ ನ್ಯಾಯವಾದಿ ಜಯಾನಂದಯ್ಯಾ ಸ್ವಾಮಿ ಅವರು ಉತ್ತಮ ದೇಶಭಕ್ತಿ ಗಿತೇಯನ್ನು ಹಾಡಿದಕ್ಕೆ ನ್ಯಾಯಮೂರ್ತಿಗಳಾದ ರಾಜೇಂದ್ರ ಬಾದಾಮಿಕರ್ ಅವರು ಪ್ರಶಂಸನಾ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಬಿ.ಎಮ್ ಶ್ಯಾಮ್‍ಪ್ರಸಾದ್, ಹಿರಿಯ ನ್ಯಾಯಮೂರ್ತಿಗಳಾದ ಇ.ಎಸ್ ಇಂದ್ರೇಶ, ಎಆರ್‍ಜಿ ಮರಳಸಿದ್ದರ್ಯಾಧ್ಯ, ದಯಾನಂದ ಹಿರೇಮಠ ಸೇರಿದಂತೆ ಇತರರು ಇದ್ದರು.