ಜಯಶೀಶಾಗೆ ೫೦ ಸಾವಿರ ರೂ.ದೇಣಿಗೆ ನೀಡಿದ ಬಿಇಓ ಪ್ರಭು ಕನ್ನನ್

ರಾಯಚೂರು,ಜು.೨೮- ತಾಲೂಕಿನ ತುರುಕನ ಡೋಣಿ ಗ್ರಾಮದ ಜಯಶೀಶ (೧೦) ಕಿಡ್ನಿ ಸಮಸ್ಯೆಯನ್ನು ಎದುರಿಸುತ್ತಿರುವ ಬಗ್ಗೆ ಗಮನ ಹರಿಸಿದ ರಾಯಚೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಕನ್ನನ್ ಅವರು ತನ್ನ ವೇತನದಲ್ಲಿ ಶೇ. ೫೦ ರಷ್ಟು ವೇತನವನ್ನು ದೇಣಿಗೆ ರೂಪದಲ್ಲಿ ೫೦ ಸಾವಿರ ರೂ.ಹಣವನ್ನು ಜಯಶೀಶಗೆ ನೀಡಿದರು. ಇಂದು ಬೆಳಿಗ್ಗೆ ಜಯಶೀಶ ತಂದೆ ಮೇಶಕ್ ಅವರಿಗೆ ನೀಡಿದರು.