ಜಯಶೀಲ ಪರ ಮುನಿಯಪ್ಪ ಮತ ಯಾಚನೆ

ಕೋಲಾರ,ಡಿ.೮: ಕೋಲಾರ ಚಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿಯಾದ ಎಂ.ಎಲ್ ಅನಿಲ್‌ಕುಮಾರ್ ಅವರಿಗೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣಪಂಚಾಯತಿ ಮತ್ತು ಗ್ರಾಮ ಪಂಚಾಯತಿಯ ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಸದಸ್ಯರು ದೇಶ ಮತ್ತು ರಾಜ್ಯದ ಉಳಿವಿಗಾಗಿ ಮತ್ತು ರೈತರು, ಕಾರ್ಮಿಕರು, ದೀನದಲಿತರ ಶ್ರೇಯಸ್ಸಿಗಾಗಿ ಮತ್ತು ಸಂವಿಧಾನದ ರಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಪ್ರಥಮ ಪ್ರಾಸಸ್ಯದ ಮತವನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ಕೇಂದ್ರದ ಮಾಜಿ ಸಚಿವರೂ ಹಾಗೂ ಸಿ.ಡ್ಲ್ಯೂ.ಸಿ ಸದಸ್ಯರು ಆದ ಕೆ.ಹೆಚ್ ಮುನಿಯಪ್ಪ ರವರು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಮತದಾರರಲ್ಲಿ ಮನವಿ ಮಾಡಿದ್ದಾರೆ.