ಜಯಲಕ್ಷ್ಮಿ ಕಾರಂತ್‌ಗೆ “ರಂಗ ಚಿನ್ನಾರಿ” ರಾಜ್ಯಪ್ರಶಸ್ತಿ ಪ್ರದಾನ

ದಾವಣಗೆರೆ ಮೇ,.25; ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ ಖ್ಯಾತ ಹಿರಿಯ ಯಕ್ಷಗಾನ ವಿದ್ವಾಂಸರು, ಕನ್ನಡಪರ ಸಂಘಟಕರು ಮೂಲೆ ಗುಂಪಾಗಿರುವ ಮಹಿಳೆಯರಿಗೆ ಸೂಕ್ತ, ಮುಕ್ತ, ವೇದಿಕೆ ಕಲ್ಪಿಸಿ ಅವರಲ್ಲಿ ಪ್ರತಿಭೆಗಳನ್ನು ಹೊರ ತಂದು, ವಿಶ್ವವಿಖ್ಯಾತವಾದ ಕರ್ನಾಟಕ ಕರಾವಳಿ ಜಿಲ್ಲೆಗಳ ಆರಾಧನ ಕಲೆ ಯಕ್ಷಗಾನವನ್ನು ಮಕ್ಕಳಿಗೂ ಅರಿವು ಮೂಡಿಸಿ ಯಕ್ಷಪ್ರತಿಭೆಗಳನ್ನು ತಯಾರು ಮಾಡುತ್ತಿರುವ ನಿರಂತರ ಸಾಂಸ್ಕೃತಿಕ ಕ್ರಿಯಾಶೀಲ ಚಟುವಟಿಕೆಗಳೊಂದಿಗೆ ಖ್ಯಾತರಾದ ಹಿರಿಯ ಚೇತನ ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್‌ರವರಿಗೆ ಇತ್ತೀಚಿಗೆ ಕಾಸರಗೋಡಿನ ರಂಗ ಚಿನ್ನಾರಿ ಸಾಂಸ್ಕೃತಿಕ ಸಂಸ್ಥೆಯಿಂದ ಸಂಸ್ಥೆಯ 17ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ “ರಂಗ ಚಿನ್ನಾರಿ” ರಾಜ್ಯ ಪ್ರಶಸ್ತಿಯೊಂದಿಗೆ ಪುರಸ್ಕರಿಸಿ ಸನ್ಮಾನಿಸಲಾಯಿತು ಎಂದು ಸಂಸ್ಥೆಯ ನಿರ್ದೇಶಕರಾದ ಕಾಸರಗೋಡಿ ಚಿನ್ನ ತಿಳಿಸಿದ್ದಾರೆ.ಶ್ರೀ ಎಡೆನೀರು ಮಠದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ವಹಿಸಿಕೊಂಡಿದ್ದು ಖ್ಯಾತ ನೇತ್ರ ತಜ್ಞ ಡಾ. ಅನಂತ ಕಾಮತ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಖ್ಯಾತ ನ್ಯಾಯವಾದಿ ಹಾಗೂ ಶಾಸಕರಾದ ಪ್ರತಾಪ ಸಿಂಹನಾಯಕರವರು ಪ್ರಶಸ್ತಿ ಪ್ರದಾನ ಮಾಡಿದರು.ಮುಖ್ಯ ಅತಿಥಿಗಳಾಗಿ ಖ್ಯಾತ ನೃತ್ಯ ಕಲಾವಿದೆ ವಿದುಷಿ ಮಾನಸಿ ಸುಧೀರ್, ಹಿರಿಯ ಶಿಕ್ಷಕ ಮಾಧವ ಹೇರಳ, ಎಡೆನೀರು ಮಠದ ವ್ಯವಸ್ಥಾಪಕರಾದ ರಾಜೇಂದ್ರ ಕಲ್ಲೂರಾಯ, ಅಂತರಾಷ್ಟಿçÃಯ ಖ್ಯಾತ ರಂಗ ಕಲಾವಿದ ಗಣೇಶ್ ಕುಂಬಳೆ, ಡಾ.ರಮಾ ಐಯ್ಯರ್, ವಿದ್ವಾನ್ ಸುಧೀರ್‌ರಾವ್, ರಂಗ ಕಲಾವಿದ ಸುಧಾಕರ್ ಸಾಲ್ಯಾನ್, ಹಿರಿಯ ಸಾಹಿತಿ ಡಾ. ನಾ.ದಾ. ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಾಂಸ್ಕೃತಿಕ ಹಿರಿಯ ಸಾಧಕಿ ಶ್ರೀಮತಿ ಜಯಲಕ್ಷ್ಮಿ ಕಾರಂತ್‌ರವರಿಗೆ ದಾವಣಗೆರೆಯ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಸೇರಿದಂತೆ ಸಂಸ್ಥೆಯ ಸರ್ವ ಸದಸ್ಯರು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.