ಜಯಪ್ರಕಾಶ್‌ಗೆ ಡಾಕ್ಟರೇಟ್ ಆಫ್ ಸೈನ್ಸ್ ಪದವಿ

ತುಮಕೂರು, ಜು. ೨೧- ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಲೆಫ್ಟಿನೆಂಟ್ ಡಾ.ಎಚ್.ವಿ.ಜಯಪ್ರಕಾಶ್ ಅವರು ಮಧುರೈನ ಕಾಮರಾಜ್ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರ ವಿಭಾಗದಲ್ಲಿ ನಡೆಸಿದ ಸಂಶೋಧನೆಗೆ ಡಾಕ್ಟರೇಟ್ ಆಫ್ ಸೈನ್ಸ್ ಪದವಿ ಲಭಿಸಿದೆ.
ಮಧುರೈನಲ್ಲಿ ನಡೆದ ಕಾಮರಾಜ್ ವಿಶ್ವವಿದ್ಯಾಲಯದ ೫೪ನೇ ಘಟಿಕೋತ್ಸವದಲ್ಲಿ ತಮಿಳುನಾಡು ರಾಜ್ಯಪಾಲರಾದ ಆರ್.ಎನ್.ರವಿ ಅವರು ಜಯಪ್ರಕಾಶ್ ಅವರಿಗೆ ಡಾಕ್ಟರೇಟ್ ಸೈನ್ಸ್ ಪದವಿ ಪ್ರದಾನ ಮಾಡಲಾಯಿತು.
ಈಗಾಗಲೇ ಪಿಎಚ್‌ಡಿ ಪಡೆದಿದ್ದ ಡಾ. ಜಯಪ್ರಕಾಶ್ ಅವರು ಕಳೆದ ಒಂದು ದಶಕದಿಂದ ಕಾಲೇಜಿನಲ್ಲಿ ಎನ್‌ಸಿಸಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜಿನ ಕ್ಯಾಂಪಸ್ ಅಲ್ಲದೆ, ತುಮಕೂರು ಜಿಲ್ಲೆ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ನಡೆಸಿದ ಕೋವಿಡ್ ಜಾಗೃತಿ ಆಂದೋಲನ, ಪರೀಕ್ಷಾ ಕಾರ್ಯಗಳು ಮತ್ತು ಲಸಿಕೆ ನೀಡುವಿಕೆ ಕಾರ್ಯಗಳು ಸೇರಿದಂತೆ ಸಮುದಾಯದ ಸಹಭಾಗಿತ್ವದ ಕೆಲಸಗಳಲ್ಲಿ ಭಾಗವಹಿಸಿದ್ದರು.
ಶೈಕ್ಷಣಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿದ್ದು, ಇದೀಗ ರಸಾಯನ ಶಾಸ್ತ್ರ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ ನಡೆಸಿ, ಡಾಕ್ಟರೇಟ್ ಆಫ್ ಸೈನ್ಸ್ ಪದವಿ ಗಳಿಸಿದ್ದಾರೆ. ಈ ಪದವಿಗೆ ಭಾಜನಾಗಿರುವ ಡಾ.ಎಚ್.ವಿ. ಜಯಪ್ರಕಾಶ್ ಅವರನ್ನು ಕಾಲೇಜಿ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ್ ಮತ್ತು ಪ್ರಾಧ್ಯಾಪಕ ಸಿಬ್ಬಂದಿ ಅಭಿನಂದಿಸಿದೆ.