
ಕಲಬುರಗಿ:ಆ.15: ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಇಂದು ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಗಣ್ಯರ ಬಲಿದಾನ ಮರೆಯುವಂತಿಲ್ಲ.ನಮಗೆ ಸಿಕ್ಕ ಸ್ವಾತಂತ್ರ್ಯ ಸಮಾಜ ಕಟ್ಟುವಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದರು.ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ, ಉಪಾಧ್ಯಕ್ಷ ವಿರೇಶ ದಂಡೋತಿ, ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ, ಸಹ ಕಾರ್ಯದರ್ಶಿ ಸಿದ್ಧಲಿಂಗ ಗುಬ್ಬಿ,ಕೋಶಾಧ್ಯಕ್ಷ ಬಸವರಾಜ ಮಾಗಿ, ಸದಸ್ಯರಾದ ಬಸವರಾಜ ಅನ್ವರಕರ,ಎಂ.ಡಿ.ಮಠಪತಿ, ಭೀಮಾಶಂಕರ ಶೆಟ್ಟಿ, ನಾಗರಾಜ ಖೂಬಾ, ಮಲ್ಲಯ್ಯ ಸ್ವಾಮಿ, ಮಧುಸೂದನ, ಮನೋಹರ ಬಡಶೇಷಿ,ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ, ಉಪಾಧ್ಯಕ್ಷ ಅನಿತಾ ನವಣೆ, ಪದಾಧಿಕಾರಿಗಳಾದ ಸುಷ್ಮಾ ಮಾಗಿ, ಸುರೇಖಾ ಬಾಲಕೊಂದೆ, ಗಂಗಾ ಅನವರಕರ,ಲತಾ ತುಪ್ಪದ, ವಿಜಯಾ ದಂಡೋತಿ, ಪಾರ್ವತಿ ಶೆಟ್ಟಿ, ವಿಜಯಲಕ್ಷ್ಮಿ ಪುರ್ಮಾ, ಶೋಭಾ ಮಾಲಿಪಾಟೀಲ ಅಂಬಕ್ಕಾ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.