ಜಯನಗರ ಶಿವಮಂದಿರದಲ್ಲಿ ಮಳೆಗಾಗಿ ಶಿವನಿಗೆ ಜಲಾಭಿಷೇಕ

ಕಲಬುರಗಿ:ಜು.7:ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಸುರಿದು ಸಮೃದ್ಧ ಬೆಳೆ ಬರಲಿ ಎಂದು ಜಯನಗರ ಶಿವಮಂದಿರದಲ್ಲಿ ಜಯನಗರ ಬಡಾವಣೆಯ ಮಹಿಳಾ ಸದಸ್ಯರು ಇಂದು ಶಿವನಿಗೆ ಜಲಾಭಿಷೇಕ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.

ಪೂಜೆ ನಂತರ ಬುತ್ತಿ ಭೋಜನ ಕೂಟ ಎರ್ಪಡಿಸಿದ್ದು,ಎಲ್ಲರೂ ಸೇರಿ ಭೋಜನ ಮಾಡಿದ್ದು ವಿಶೇಷವಾಗಿತ್ತು.ಅನೇಕ ವರ್ಷದಿಂದ ಶಿವಮಂದಿರದಲ್ಲಿ ಈ ರೀತಿ ಪೂಜೆ ನಡೆಯುತ್ತಿದೆ.ಮಳೆ ಅಭಾವ ಇದ್ದಾಗ ಪ್ರತಿ ಬಾರಿ ಮಹಿಳಾ ಸದಸ್ಯರು ಜಗದೊಡೆಯ ಶಿವನಿಗೆ ಜಲಾಭಿಷೇಕ ಮಾಡಿ ಮಳೆ ಬರಲಿ ಎಂದು ಪ್ರಾರ್ಥನೆ ಮಾಡುತ್ತಾರೆ.ಶಿವನ ನಾಮ ಜಪಿಸುತ್ತಾರೆ.ನಂತರ ಭಜನೆ ಮಾಡುತ್ತಾರೆ.ಹೀಗೆ ಶಿವನ ಸ್ಮರಣೆ ಮಾಡಿದಾಗಲೆಲ್ಲ ಮಳೆ ಆಗಿದ್ದು,ಈ ಬಾರಿಯೂ ಮಳೆ ಬರುವ ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ಉಪಾಧ್ಯಕ್ಷ ವಿರೇಶ ದಂಡೋತಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ, ಕಾರ್ಯದರ್ಶಿ ಶಿವಪುತ್ರಪ್ಪ ಮರಡಿ, ಕೋಶಾಧ್ಯಕ್ಷ ಬಸವರಾಜ ಮಾಗಿ, ಸದಸ್ಯರಾದ ಬಸವರಾಜ ಪುರ್ಮಾ, ಅಶೋಕ ಪಾಟೀಲ, ಮಲ್ಲಯ್ಯ ಸ್ವಾಮಿ, ಶಿವಾನಂದ ಹಾಗರಗಿ, ಮಹಿಳಾ ಸದಸ್ಯರಾದ ಶ್ರೀಮತಿ ಅಂಬಕ್ಕಾ ಪಾಟೀಲ, ಶ್ರೀಮತಿ ಅನುರಾಧ ಕುಮಾರಸ್ವಾಮಿ, ಶ್ರೀಮತಿ ಸುರೇಖಾ ಬಾಲಕೊಂದೆ, ಶ್ರೀಮತಿ ವಿಜಯಾ ದಂಡೋತಿ, ಶ್ರೀಮತಿ ಸುಷ್ಮಾ ಮಾಗಿ, ಶ್ರೀಮತಿ ಗೀತಾ ಲಿಂಗರಾಜ, ಶ್ರೀಮತಿ ಅಶ್ವಿನಿ ಪಾಟೀಲ್, ಶ್ರೀಮತಿ ಶಕುಂತಲಾ ಮರಡಿ, ಶ್ರೀಮತಿ ಶೈಲಜಾ ವಾಲಿ, ಶ್ರೀಮತಿ ಪುರ್ಮಾ, ಶ್ರೀಮತಿ ಲತಾ, ತುಪ್ಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.