ಜಯನಗರ ಶಿವಮಂದಿರದಲ್ಲಿ ಆ.30 ರಂದು ಗುಂಡಣ್ಣ ಡಿಗ್ಗಿ ಅವರಿಂದ ಹಾಸ್ಯ ಸಂಜೆ

ಕಲಬುರಗಿ:ಆ.28: ಶ್ರಾವಣ ಮಾಸದ ಅಂಗವಾಗಿ ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಒಂದು ತಿಂಗಳ ನಿರಂತರ ಆಧ್ಯಾತ್ಮಿಕ ಶಿವ ಧರ್ಮ ಪ್ರವಚನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು ಆ.30 ಬುಧವಾರರಂದು ರಾತ್ರಿ 8 ಗಂಟೆಗೆ ಕಲ್ಯಾಣ ಕರ್ನಾಟಕದ ಹಾಸ್ಯ ಚಕ್ರವರ್ತಿ ಗುಂಡಣ್ಣ ಡಿಗ್ಗಿ ಅವರ ಹಾಸ್ಯ ಮನೋರಂಜನೆ ಕಾರ್ಯಕ್ರಮ ಎರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು ಪ್ರವಚನದ 13ನೇ ದಿನವಾದ ಅಂದು ಪ್ರವಚನದ ನಂತರ ಜನರ ಅಪೇಕ್ಷೆಯಂತೆ ಗುಂಡಣ್ಣ ಡಿಗ್ಗಿ ಅವರು ಶಿವಮಂದಿರದಲ್ಲಿ ಹಾಸ್ಯ ಮನೋರಂಜನೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಕಳೆದ ಬಾರಿ ಶ್ರಾವಣ ಮಾಸದಲ್ಲಿ ಪ್ರವಚನ ಕಾರ್ಯಕ್ರಮದಲ್ಲಿ ತಮ್ಮ ಹಾಸ್ಯದಿಂದ ಜನರಿಗೆ ಮನರಂಜನೆ ನೀಡಿದ್ದರು.ಅಂದು ರಾತ್ರಿ 8 ಗಂಟೆಗೆ ಜನರು ಕುಟುಂಬ ಸಮೇತ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.