ಜಯದ ಹಳಿಗೆ ಮರಳಿದ ಕೆಕೆಆರ್

ಅಹಮದಾಬಾದ್ , ಏ.26- ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಕಿಂಗ್ಸ್ ಪಂಜಾಬ್ ವಿರುದ್ದದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ಐದು ವಿಕೆಟ್ ಗಳಿಂದ ಗೆಲುವು ಸಾಧಿಸಿತು.
ಸತತ ನಾಲ್ಕು ಪಂದ್ಯಗಳಿಂದ ಸೋಲು ಅನುಭವಿಸಿದ್ದ ಕೆಕೆಆರ್ ವಿಜಯದ ನಗೆ ಬೀರಿತು.


ಅಲ್ಪಮೊತ್ತದ ಗೆಲುವಿನ ಗುರಿ ಬೆನ್ನಹತ್ತಿದ ಮೊರ್ಗನ್ ಬಳಗ 16.4 ಓವರ್ ಗಳಲ್ಲಿ‌ ಐದು ವಿಕೆಟ್ ಕಳೆದುಕೊಂಡು 126 ರನ್ ಗಳಿಸಿತು.
ರಾಹುಲ್ ತ್ರಿಪಾಠಿ 32 ಎಸೆತಗಳಲ್ಲಿ 41 ರನ್ ಗಳಿಸಿದರು.
ಮೊರ್ಗನ್ 40 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಅಜೇಯ 47 ರನ್ ಗಳಿಸಿದರೆ, ಕಾರ್ತಿಕ್ ಔಟಾಗದೆ 12 ರನ್ ಗಳಿಸಿದರು. ರಸೆಲ್ 10 ರನ್ ಗಳಿಸಿ ನಿರ್ಗಮಿಸಿದರು.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್‌ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳ ಅಲ್ಪಮೊತ್ತ ದಾಖಲಿಸಿತು.
ಕೆಕೆ ಆರ್ ಬೌಲಿಂಗ್ ದಾಳಿಗೆ ರಾಹುಲ್ ಪಡೆ ತತ್ತರಿಸಿತು.ಮಯಾಂಕ್ 31, ಕ್ರಿಸ್ ಜೋರ್ಡಾನ್ 30 ರನ್ ಗಳಿಸಿದರು.ರಾಹುಲ್ 19 ರನ್ ಗಳಿಸಿದರೆ, ಅಪಾರ ನಿರೀಕ್ಷೆ ಮೂಡಿಸಿದ್ದ ಕ್ರಿಸ್ ಗೇಲ್ ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದರು.
ಮಧ್ಯಮ ಕ್ರಮಾಂದಲ್ಲೂ ಯಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ.
ಪ್ರಸಿದ್ಧ್ ಕೃಷ್ಣ ಮೂರು, ಕಮಿನ್ಸ್ ಹಾಗೂ ನರೇನ್ ತಲಾ ಎರಡು ವಿಕೆಟ್ ಪಡೆದರು.