ಜಯದೇವ ಆಸ್ಪತ್ರೆ ಕಾಮಗಾರಿ ವೀಕ್ಷಿಸಿದ ಡಾ.ಮಂಜುನಾಥ

ಕಲಬುರಗಿ,ಮೇ 8: ಸುಮಾರು ರೂ. 350 ಕೋಟಿ ಅಂದಾಜು ವೆಚ್ಚದಲ್ಲಿ ನಗರದಎಸ್.ಎಂ.ಪಂಡಿತ ರಂಗಮಂದಿರದ ಬಳಿ ನಿರ್ಮಿಸಲಾಗುತ್ತಿರುವ ಜಯದೇವ ಹೃದ್ರೋಗ ವಿಜ್ಞಾನಗಳ ಸಂಶೋಧನಾ ಕೇಂದ್ರದ ಕಾಮಗಾರಿ
ಸ್ಥಳಕ್ಕೆ ಜಯದೇವ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ ಇಂದು
ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ಯ ಸರಕಾರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ
ಜಂಟಿ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಈ ಆಸ್ಪತ್ರೆಯನ್ನು
ಸುಮಾರು 7.2 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದು, ಗುಣಮಟ್ಟದ
ಕಾಮಗಾರಿಗೆ ಒತ್ತು ನೀಡಲಾಗುತ್ತಿದೆ ಎಂದರು.
ನಿರ್ಮಾಣ ಹಂತದ ಹೊರ ರೋಗಿಗಳ ವಿಭಾಗ, ಒಳ ರೋಗಿಗಳ ವಿಭಾಗ
ಮತ್ತು ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳುವ ಥಿಯೇಟರ್‍ಗಳನ್ನುಪರಿಶೀಲಿಸಿದ ಅವರು, ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಬುರಗಿ ನಗರದಲ್ಲಿ ಜಯದೇವ ಆಸ್ಪತ್ರೆ ನಿರ್ಮಾಣ ಕಾಮಗಾರಿ
ಪೂರ್ಣಗೊಂಡ ಬೆನ್ನಲ್ಲೇ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು,ಬಳ್ಳಾರಿ, ವಿಜಯಪುರ, ನೆರೆಯ ಸೊಲ್ಲಾಪುರ ಸೇರಿದಂತೆ ಸುಮಾರು 9-10ಜಿಲ್ಲೆಗಳ ಜನರಿಗೆ ಇದರಿಂದ ಅನುಕೂಲವಾಗಲಿದೆ. ಕಾಮಗಾರಿ ಅತ್ಯಂತ ವೇಗವಾಗಿನಡೆಯುತ್ತಿದ್ದು, ಮುಂದಿನ 8-9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.ಇದೇವೇಳೆ, ಡಾ.ಮಂಜುನಾಥ ಅವರೊಂದಿಗೆ ಉಪಸ್ಥಿತರಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ವಾಣಿಜ್ಯ ಮತ್ತು ಕೈಗಾರಿಕಾ ಘಟಕದ ಅಧ್ಯಕ್ಷ ಅಮರನಾಥ ಪಾಟೀಲ್ ಮಾತನಾಡಿ, ಜಯದೇವ ಆಸ್ಪತ್ರೆಯ ಚಟುವಟಿಕೆ ಆರಂಭಗೊಳ್ಳುವುದರಿಂದ ಕಲಬುರಗಿ ನಗರದಲ್ಲಿ ವಾಣಿಜ್ಯಚಟುವಟಿಕೆಗಳಿಗೂ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಚಾಲಕ ಆನಂದ ದಂಡೋತಿ, ಅಖಿಲ ಭಾರತ ವೀರಶೈವ ಲಿಂಗಾಯತ
ಮಹಾಸಭಾ ಯುವ ಘಟಕದ ಜಿಲ್ಲಾ ಗೌರವಾಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ,ರಾಜುಗೌಡ ನಾಗನಹಳ್ಳಿ ಹಾಗೂ ಡಾ.ಬಾಬುರಾವ್ ಹುಡಗಿಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿಯ ಹೊಂದಾಣಿಕೆ
ಮಾಡಿಕೊಂಡಿಲ್ಲ. ಈ ಭಾಗದ ಜನರ ಹಿತದೃಷ್ಟಿಯಿಂದ ಅತ್ಯಾಧುನಿಕ
ಗುಣದರ್ಜೆಯ ಹೃದ್ರೋಗ ಆಸ್ಪತ್ರೆ ನಿರ್ಮಿಸುವುದೊಂದೇ ನಮ್ಮ
ಕನಸು.
-ಡಾ.ಸಿ.ಎನ್.ಮಂಜುನಾಥ
ನಿರ್ದೇಶಕರು, ಜಯದೇವ
ಆಸ್ಪತ್ರೆ, ಬೆಂಗಳೂರು