ಜಯದೇವ ಆಸ್ಪತ್ರೆಗೆ ಮಾಜಿ ಸಿಎಂ ಧರ್ಮಸಿಂಗ್ ಹೆಸರಿಡಲು ಆಗ್ರಹ

ಕಲಬುರಗಿ,ಆ 28: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್ ಡಿಬಿ) 185 ಕೋಟಿ ರೂ. ಅನುದಾನದಿಂದ ತಲೆ ಎತ್ತಿರುವ ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಾಜಿ ಸಿಎಂ ದಿ.ಧರ್ಮಸಿಂಗ್ ಅವರ ಹೆಸರಿಡಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಸಮಿತಿ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ಆಗ್ರಹಿಸಿದರು.ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಜಯದೇವ ಹೃದ್ರೋಗ ಸಂಸ್ಥೆಯ ಜೊತೆಗೆ ಮಾಜಿ ಸಿಎಂ ದಿ. ಧರ್ಮಸಿಂಗ್ ಸ್ಮರಣಾರ್ಥ ಎಂದು ಹೆಸರು ಸೇರಲೇಬೇಕು ಎಂದು ಆಗ್ರಹಿಸಿದರು.
1980 ರಲ್ಲಿ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಅವರ ಕಾಲದಲ್ಲಿ ಸಚಿವರಾಗಿದ್ದ ಧರ್ಮಸಿಂಗ್ ಅವರ ನೇತೃತ್ವದಲ್ಲಿಯೇ ಹಿಂದುಳಿದ ಭಾಗದ ಅಭಿವೃದ್ಧಿಗಾಗಿ ಸಮಿತಿ ರಚಿಸಲಾಗಿತ್ತು. ಧರ್ಮಸಿಂಗ್ ಸಮಿತಿ ನೀಡಿದ ವರದಿ ಆಧರಿಸಿಯೇ ಅಂದಿನ ಹೈಕ ಪ್ರದೇಶ ಅಭಿವೃದ್ಧಿ ಮಂಡಲಿ ರಚನೆಯಾಯಿತು. ಧರ್ಮಸಿಂಗ್ ಅವರ ವಿಶೇಷ ಒಲವು, ನಿಲುವುಗಳಿಂದಲೇ ಕೆಕೆಆರ್‍ಡಿಬಿ ತಲೆ ಎತ್ತಿದ್ದು, ಇದೀಗ ಅದೇ ಮಂಡಳಿಯ ಕೋಟ್ಯಾಂತರ ರುಪಾಯಿ (183 ಕೋಟಿ ರು) ಹಣದಲ್ಲಿ ಜಯದೇವ ಆಸ್ಪತ್ರೆ ಕಲಬುರಗಿಗೆ ಬಂದಿರೋದರಿಂದ ಈ ಆಸ್ಪತ್ರೆಯೊಂದಿಗೆ ಧರಂಸಿಂಗ್ ಅವರನ್ನು ಸ್ಮರಿಸಲು ಇದು ಸಕಾಲವಾಗಿದೆ. ಶೀಘ್ರದಲ್ಲಿಯೇ ಜಿಲ್ಲೆಯ ಸಮಾನಮನಸ್ಕ ಸಂಘಟನೆಗಳ ಮುಖಂಡರ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಎಂ.ಎಸ್ ಪಾಟೀಲ ನರಿಬೋಳ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಶರಣಗೌಡ ಪೆÇಲೀಸ್ ಪಾಟೀಲ, ರಾಘವೇಂದ್ರ ಕುಲಕರ್ಣಿ ಹಾಗೂಇತರರಿದ್ದರು