ಜಯತೀರ್ಥನಗರದಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ

ಕಲಬುರಗಿ,ಏ 25: ಇಲ್ಲಿನ ಜಯತೀರ್ಥ ನಗರದಲ್ಲಿ ಇಂದು ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು.ಬೆಳಿಗ್ಗೆ ಹಂಸ ನಾಮಕ ಮತ್ತು ಲಕ್ಷ್ಮೀನಾರಾಯಣ ಪಾರಾಯಣ ಸಂಘದಿಂದ ಶ್ರೀ ಆದಿ ಶಂಕರಾಚಾರ್ಯ 108 ನಾಮಾವಳಿ ,ಉಳಿದ ಸ್ತೋತ್ರಗಳ ಪಾರಾಯಣ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುರೇಶ ಕುಲಕರ್ಣಿ ನೆಲೋಗಿ ಅವರು ಮಾತನಾಡಿ ಶಂಕರಾಚಾರ್ಯರು ಕೇವಲ ಎಂಟು ವರ್ಷ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ ಧರ್ಮ ರಕ್ಷಣೆಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಇಡೀ ಭಾರತವನ್ನು ಸಂಚಾರ ಮಾಡಿ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದವರು. ಭಕ್ತಿ ಸೂತ್ರಗಳಲ್ಲಿ ಸೌಂದರ್ಯ ಲಹರಿ ಹಾಗೂ ಭಜಗೋವಿಂದಂ ರಚಿಸಿದ್ದರು. ನೇಪಾಳದ ರಾಜನಾಥಕ್ಷಯ ಮೇರೆಗೆ ಪಶುಪತಿ ದೇವಾಲಯದಲ್ಲಿ ಕ್ರಮಬದ್ಧವಾಗಿ ಪೂಜೆಯನ್ನು ನಡೆಸಿಕೊಟ್ಟಿದ್ದರು ಎಂದು ಉಪನ್ಯಾಸ ನೀಡಿದರು.
ಪಾರಾಯಣ ಸಂಘಗಳ ಸಂಚಾಲಕ ರವಿ ಲಾತೂರಕರ ಮಾತನಾಡಿ ಆದಿ ಶಂಕರಾಚಾರ್ಯರ ಜಯಂತಿಯನ್ನು ಕೇವಲ ಬ್ರಾಹ್ಮಣರು ಮಾತ್ರ ಆಚರಣೆ ಮಾಡುವುದಲ್ಲ. ಸಮಸ್ತ ಹಿಂದೂಗಳು ಆಚರಣೆ ಮಾಡಬೇಕು.ಸರ್ಕಾರ ಕೂಡ ಇಂದು ಆದಿ ಶಂಕರಾಚಾರ್ಯರ ಜಯಂತಿಯು ತತ್ವಜ್ಞಾನಿಗಳ ದಿನ ಅಂತ ಆಚರಣೆ ಮಾಡುತ್ತಾರೆ. ಹಿಂದೂ ಧರ್ಮ ಸಂಕಟದಲ್ಲಿತ್ತು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ 4 ಪೀಠಗಳನ್ನು ಸ್ಥಾಪಿಸಿ ಹಿಂದೂ ಧರ್ಮ ಎತ್ತಿ ಹಿಡಿದ ಕೀರ್ತಿ ಗುರುಗಳದ್ದು ಎಂದು ಹೇಳಿದರು.
ಬಡಾವಣೆ ಹಿರಿಯರಾದ ಶಶಿಧರ ಜೋಶಿ, ಅತ್ರಿ ಭಟ್ ಪೂಜಾರಿ,ಜಗನ್ನಾಥ ಸಗರ,ವಿನುತ ಜೋಶಿ, ರಂಗರಾವ ಕುಲಕರ್ಣಿ,ನರಸಿಂಹ ರಾವ್ ಕುಲಕರ್ಣಿ, ಪ್ರಾಣೇಶ ಮುಜುಮಂದಾರ, ಅನಿಲ್ ಕುಲಕರ್ಣಿ, ಸುರೇಶ್ ಕುಲಕರ್ಣಿ, ವಿಜಯರಾವ್ ಅಂದೆವಾಡಿ, ವಿಶ್ವನಾಥ ಕುಲಕರ್ಣಿ, ಲಕ್ಷ್ಮಿ ಕಾಂತರಾವ್ ಕುಲಕರ್ಣಿ, ಜ್ಯೋತಿ ಲಾತೂರಕರ, ಸುಗಂಧ ಪೂಜಾರಿ, ವೀಣಾ ಕುಲಕರ್ಣಿ,ರಾಗಿಣಿ ಜೋಶಿ ನಿಧಿ, ನೈನಾ, ಸಂಜೀವ ಉಪಸ್ಥಿತರಿದ್ದರು.